CrimeNational

ವಿಮಾನದಲ್ಲಿ ಮಹಿಳೆಗೆ ಕಿರುಕುಳ; ಚೆನ್ನೈ ನಿಲ್ದಾಣದಲ್ಲಿ ವ್ಯಕ್ತಿ ಅರೆಸ್ಟ್‌!

ಚೆನ್ನೈ; ವಿಮಾನದಲ್ಲಿ ಪ್ರಯಾಣ ಮಾಡುವಾಗ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.. ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಘಟನೆ ನಡೆದಿದೆ.. ದೆಹಲಿಯಿಂದ ಚೆನ್ನೈಗೆ ಬರುತ್ತಿರುವಾಗ ವ್ಯಕ್ತಿಯೊಬ್ಬ ತನಗೆ ಕಿರುಕುಳ ಕೊಟ್ಟಿದ್ದಾನೆ ಎಂದು ಮಹಿಳೆ ಆರೋಪಿ ಮಾಡಿದ್ದಾರೆ..
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ 45 ವರ್ಷದ ರಾಜೇಶ್‌ ಶರ್ಮಾ ಎಂಬಾತನನ್ನು ಬಂಧಿಸಲಾಗಿದೆ.. ಅಕ್ಟೋಬರ್‌ 9ರಂದು ಈ ಘಟನೆ ನಡೆದಿದೆ.. ಚೆನ್ನೈನಲ್ಲಿ ಇಂಡಿಗೋ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ..
ತಮಿಳುನಾಡಿನ ಮಹಿಳೆ ಜೈಪುರ ಹಾಗೂ ದೆಹಲಿ ಪ್ರವಾಸ ಕೈಗೊಂಡಿದ್ದರು.. ಪ್ರವಾಸ ಮುಗಿಸಿಕೊಂಡು ವಾಪಸ್‌ ತವರಿಗೆ ಹಿಂತಿರುಗುತ್ತಿದ್ದರು.. ಈ ವೇಳೆ ಆಕೆಯ ಹಿಂದಿನ ಸೀಟಿನಲ್ಲಿ ಅರೋಪಿ ರಾಜೇಶ್‌ ಶರ್ಮಾ ಕುಳಿತಿದ್ದರು.. ವಿಮಾನ ಪ್ರಯಾಣ ಸಂದರ್ಭದಲ್ಲಿ ಆರೋಪಿ ರಾಜೇಶ್‌ ಶರ್ಮಾನ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿದ್ದಾನೆ ಎಂದು ತಿಳಿದುಬಂದಿದೆ.. ಈ ಬಗ್ಗೆ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ..

 

Share Post