CrimeNational

ಕೇಬಲ್‌ ಟಿವಿಯಲ್ಲಿ ನೀಲಿ ಚಿತ್ರ ಪ್ರದರ್ಶನ!; ಜನ ಶಾಕ್‌!

ಆಂಧ್ರಪ್ರದೇಶ; ಆಂಧ್ರಪ್ರದೇಶದ ಕೇಬಲ್‌ ಟಿವಿಯೊಂದರಲ್ಲಿ ಅಚಾನಕ್ಕಾಗಿ ಬ್ಲ್ಯೂ ಫಿಲಂ ಪ್ರಸಾರವಾಗಿದ್ದು, ಆ ಚಾನಲ್‌ ನೋಡುತ್ತಿದ್ದ ಸಾವಿರಾರು ಮಂದಿ ಶಾಕ್‌ ಆಗಿದ್ದಾರೆ.. ಕುಟುಂಬದ ಸದಸ್ಯರೊಂದಿಗೆ ಟಿವಿ ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆ ಪ್ರಸಾರವಾದ ನೀಲಿ ಚಿತ್ರದ ದೃಶ್ಯಗಳನ್ನು ನೋಡಿ ಜನ ಮುಜುಗರಕ್ಕೊಳಗಾಗಿದ್ದಾರೆ..

ನಂದ್ಯಾಲ ಜಿಲ್ಲೆ ನಂದಿಕೊಟ್ಕೂರಿನಲ್ಲಿ ಈ ಘಟನೆ ನಡೆದಿದೆ.. ಇಲ್ಲಿ ಫಿರೋಜ್‌ ಸಿಟಿ ಕೇಬಲ್‌ನ ಟಿವಿಯಲ್ಲಿ ಈ ನೀಲಿ ಚಿತ್ರ ಪ್ರಸಾರವಾಗಿದೆ.. ಸುಮಾರು ಹತ್ತು ನಿಮಿಷಗಳ ಕಾಲ ನೀಲಿ ಚಿತ್ರದ ದೃಶ್ಯಗಳ ಪ್ರಸಾರವಾಗಿದೆ.. ಕೇಬಲ್‌ ಚಾನಲ್‌ ನಲ್ಲಿ ಕೆಲಸ ಮಾಡುವವರು ಕಚೇರಿಯಲ್ಲಿ ಖಾಸಗಿಯಾಗಿ ನೀಲಿ ಚಿತ್ರ ನೋಡಲು ಹೋಗಿದ್ದಾರೆ.. ಈ ವೇಳೆ ಅಚಾನಕ್ಕಾಗಿ ಅದು ಕೇಬಲ್‌ ಟಿವಿಯಲ್ಲೂ ಪ್ರಸಾರವಾಗಿ ಅವಾಂತರ ಸೃಷ್ಟಿಯಾಗಿದೆ..

ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್‌ ಮಾಡಿದ್ದಾರೆ.. ಪೊಲೀಸರು ಕೇಬಲ್‌ ಟಿವಿಯ ಮೂವರು ಮಾಲೀಕರ ವಿರುದ್ಧ ಕಂಪ್ಲೇಂಟ್‌ ದಾಖಲು ಮಾಡಿಕೊಂಡು ಕ್ರಮ ಜರುಗಿಸುತ್ತಿದ್ದಾರೆ..

 

Share Post