BengaluruPolitics

ಹರಿಯಾಣ ಸೋಲಿಗೆ ಮುಡಾ ಕಾರಣವಾ..?; ಸಿದ್ದರಾಮಯ್ಯ ಪದಚ್ಯುತಿಯಾಗುತ್ತಾ..?

ಬೆಂಗಳೂರು; ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ಚುನಾವಣೆಯ ಫಲಿತಾಂಶ ಬಂದಾಗಿದೆ.. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದ್ದರೂ ಅದು ನಿರೀಕ್ಷಿತವೇ ಆಗಿತ್ತು.. ಇದರ ಜೊತೆಗೆ ಹರಿಯಾಣದಲ್ಲೂ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.. ಆದ್ರೆ ಎಲ್ಲವೂ ಉಲ್ಟಾ ಆಗಿದೆ.. ಬಿಜೆಪಿ ಮುಂದೆ ಕಾಂಗ್ರೆಸ್‌ ಮುಗ್ಗರಿಸಿದೆ.. ಹರಿಯಾಣ ಫಲಿತಾಂಶ ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಅಳಿವು ಉಳಿವನ್ನು ನಿರ್ಧಾರ ಮಾಡುತ್ತೆ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.. ಇದೀಗ, ಹರಿಯಾಣದಲ್ಲಿ ಕಾಂಗ್ರೆಸ್‌ ಸೋಲೊಪ್ಪಿಕೊಂಡಿದೆ.. ಹಾಗಾದರೆ ಸಿದ್ದರಾಮಯ್ಯ ಅವರ ಪರಿಸ್ಥಿತಿ ಏನು ಅನ್ನೋದು ಈಗ ಪ್ರಶ್ನೆ..

ಮುಡಾ ಹಗರಣದ ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರ ನಿದ್ದೆಗೆಡಿಸಿತ್ತು.. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ದೊಡ್ಡ ಹೋರಾಟವೇ ನಡೆದಿತ್ತು.. ಅನಂತರ ಕೋರ್ಟ್‌ ಆದೇಶದಿಂದಾಗಿ ಸಿದ್ದರಾಮಯ್ಯಗೆ ಭೀತಿ ಕೂಡಾ ಉಂಟಾಗಿತ್ತು.. ಈ ವಿಚಾರ ಕೇವಲ ರಾಜ್ಯಕ್ಕೆ ಸೀಮಿತ ಆಗಲಿಲ್ಲ.. ದೇಶಕ್ಕೆ ವ್ಯಾಪಿಸಿತು.. ಅದರಲ್ಲೂ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರೆಲ್ಲಾ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಸರಿಯಾಗಿಯೇ ಬಳಸಿಕೊಂಡರು.. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣ ಆರೋಪ ಕೇಳಿಬಂದಿರುವುದರನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸಿದರು.. ಹರಿಯಾಣದಲ್ಲಿ ಗೆಲ್ಲುವ ವಾತಾವರಣವಿದ್ದರೂ ಕಾಂಗ್ರೆಸ್‌ ಸೋಲಾಗಿದ್ದಕ್ಕೆ ಮುಡಾ ವಿಚಾರವೂ ಒಂದು ಪ್ರಮುಖ ಕಾರಣ ಎಂದೇ ಬಿಂಬಿಸಲಾಗುತ್ತಿದೆ..

ಚುನಾವಣೆ ಸಮಯದಲ್ಲಿ ಬಿಜೆಪಿ ನಾಯಕರು ಮುಡಾ ವಿಚಾರವನ್ನು ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.. ಹರಿಯಾಣದಲ್ಲೂ ಕಾಂಗ್ರೆಸ್‌ ಆಡಳಿತಕ್ಕೆ ಬಂದರೆ ಇಂತಹದ್ದೇ ಹಗರಣಗಳು ನಡೆಯಲಿವೆ ಎನ್ನುವ ರೀತಿಯಲ್ಲಿ ಹೇಳಿ, ಕಾಂಗ್ರೆಸ್‌ ನ್ನು ನಂಬಬೇಡಿ ಎಂದು ಪ್ರಬಲ ವಾದವನ್ನು ಮಂಡಿಸಿದ್ದರು.. ಇದು ಜನರ ಮನ ಮುಟ್ಟದಂತೆ ಕಾಣುತ್ತಿದೆ.. ಸದ್ಯಕ್ಕೆ ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ.. ಇದರಿಂದಾಗಿ ಕಾಂಗ್ರೆಸ್‌ ಉತ್ಸಾಹ ಮತ್ತೆ ಕಡಿಮೆಯಾದಂತೆ ಕಾಣುತ್ತಿದೆ.. ಇನ್ನು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯ ಚುನಾವಣೆ ಹತ್ತಿರದಲ್ಲೇ ಇದೆ.. ಇದಕ್ಕೆ ಮತ್ತೆ ಕಾಂಗ್ರೆಸ್‌ ಸಿದ್ಧವಾಗಬೇಕಿದೆ.. ಇಲ್ಲೂ ಕೂಡಾ ಬಿಜೆಪಿ ಮುಡಾ ಮತ್ತಿತರ ವಿಚಾರಗಳನ್ನೇ ಮುಂದಿಟ್ಟುಕೊಂಡು ಜನರ ಮನಗೆಲ್ಲುವ ಪ್ರಯತ್ನ ಮಾಡಬಹುದು.. ಭ್ರಷ್ಟಾಚಾರದ ಆರೋಪ ಕೇಳಿಬಂದರೂ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಉಳಿಸಿಕೊಂಡಿರುವುದರ ಬಗ್ಗೆ ಬಿಜೆಪಿ ಮಾತನಾಡಬಹುದು.. ಇದು ಕಾಂಗ್ರೆಸ್‌ ಹೈಕಮಾಂಡ್‌ಗೆ ಸಹಜವಾಗಿಯೇ ಮುಜುಗರ ತಂದೊಡ್ಡುತ್ತದೆ..

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗುರುತರ ಆರೋಪ ಇಲ್ಲದೇ ಹೋದರೂ ಕೂಡಾ ಇದು ಕಾಂಗ್ರೆಸ್‌ಗೆ ಮುಜುಗರ ತಂದೊಡ್ಡಿರುವುದಂತೂ ಸತ್ಯ.. ಆದಂತ ಸಿದ್ದರಾಮಯ್ಯರಂತಹ ದೊಡ್ಡ ಜನ ಬೆಂಬಲವಿರುವ ನಾಯಕನನ್ನು ಅಧಿಕಾರದಿಂದ ಇಳಿಸಿದರೆ ಏನಾಗುತ್ತದೋ ಎಂಬ ಭಯ ಕೂಡಾ ಕಾಂಗ್ರೆಸ್‌ ಗಿದೆ.. ಹೀಗಾಗಿ ಸಿದ್ದರಾಮಯ್ಯ ಅವರನ್ನು ಇಲ್ಲಿಯವರೆಗೂ ಬೆಂಬಲಿಸಿಕೊಂಡು ಬಂದಿದೆ.. ಆದ್ರೆ ಇದೀಗ ಸಿಎಂ ಆಕಾಂಕ್ಷಿಗಳು ಪಟ್ಟಿ ಹೆಚ್ಚಾಗುತ್ತದೆ.. ಯಾವ್ಯಾವುದೋ ಹೆಸರುಗಳಲ್ಲಿ ಮೀಟಿಂಗ್‌ಗಳು ನಡೆಯುತ್ತಿವೆ.. ದಲಿತ ಸಿಎಂ ವಿಚಾರ ಹೆಚ್ಚು ಮುನ್ನೆಲೆಗೆ ಬಂದಿದೆ.. ಇನ್ನೊಂದು ಡಿ.ಕೆ.ಶಿವಕುಮಾರ್‌ ಕೂಡಾ ಸಿಎಂ ಸ್ಥಾನ ಪ್ರಬಲ ಆಕಾಂಕ್ಷಿಯಾಗಿದ್ದಾರೆ..

ಮುಂದೆ ಮುಖ್ಯವಾಗಿ ಮಹಾರಾಷ್ಟ್ರ ಚುನಾವಣೆ ಎದುರಾಗುವುದರಿಂದ ಅಲ್ಲೂ ಕೂಡಾ ಇಂತಹ ಮುಜುಗರ ತಂದುಕೊಳ್ಳೋದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಇಷ್ಟಪಡೋದಿಲ್ಲ ಎಂದೇ ಎಲ್ಲರೂ ಭಾವಿಸಿದ್ದಾರೆ.. ಹಾಗೇನಾದರೂ ಆದರೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಬಹುದು.. ಆರೋಪಮುಕ್ತರಾಗಿ ಬಂದ ಮೇಲೆ ಮತ್ತೆ ನಿಮ್ಮನ್ನೇ ಸಿಎಂ ಮಾಡುತ್ತೇವೆ ಎಂದು ಹೇಳಬಹುದು.. ಹಾಗೇನಾದರೂ ಆದ್ರೆ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರ ಏನಾಗಿರುತ್ತದೆ…? ಅವರ ಬೆಂಬಲಿಗ ಶಾಸಕರ ನಿರ್ಧಾರ ಏನಾಗುತ್ತದೆ..? ಎಂಬುದು ಕುತೂಹಲಕ್ಕೆ ಕಾರಣವಾಗುತ್ತದೆ..

 

Share Post