NationalPolitics

ʻರಾಜ್ಯದ ಮುಂದಿನ ಸಿಎಂ ಸತೀಶ್‌ ಜಾರಕಿಹೊಳಿʼ; ಇದು ಸಾಧ್ಯವಾಗುತ್ತಾ..?

ತುಮಕೂರು; ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಸಂಕಷ್ಟ ಎದುರಾಗಿದೆ.. ಹೀಗಾಗಿ ಸಿಎಂ ಬದಲಾವಣೆಯಾಗುವ ಬಗ್ಗೆ ಚರ್ಚೆಯಾಗುತ್ತಿದೆ.. ಈ ನಡುವೆ ದಲಿತ ಸಿಎಂ ವಿಚಾರ ಹೆಚ್ಚು ಮುನ್ನೆಲೆಗೆ ಬಂದಿದೆ.. ಸತೀಶ್‌ ಜಾರಕಿಹೊಳಿ ಪದೇ ಪದೇ ದೆಹಲಿ ಭೇಟಿಯಾಗಿ ಹೈಕಮಾಂಡ್‌ ಜೊತೆ ಚರ್ಚೆ ನಡೆಸುತ್ತಿದ್ದಾರೆ.. ಹೀಗಿರುವಾಗಲೇ ತುಮಕೂರಿನಲ್ಲಿ ಮುಂದಿನ ಸಿಎಂ ಸತೀಶ್‌ ಜಾರಕಿಹೊಳಿ ಎಂಬ ಕೂಗು ಕೇಳಿಬಂದಿದೆ..
ತುಮಕೂರಿನಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಏರ್ಪಡಿಸಲಾಗಿತ್ತು.. ಈ ಸಮಾರಂಭದಲ್ಲಿ ಸತೀಶ್‌ ಜಾರಕಿಹೊಳಿ ಪಾಲ್ಗೊಂಡಿದ್ದರು.. ಜಾರಕಿಹೊಳಿಯವರು ವೇದಿಕೆಗೆ ಆಗಮಿಸುವಾಗ ಮುಂದಿನ ಮುಖ್ಯಮಂತ್ರಿ ಸತೀಶ್‌ ಜಾರಕಿಹೊಳಿಗೆ ಜೈ ಎಂದು ನಿರೂಪಕರು ಘೋಷಣೆ ಕೂಗಿದರು.. ಸೇರಿದ್ದವರೆಲ್ಲಾ ಇದಕ್ಕೆ ದನಿಗೂಡಿಸಿದರು.. ಆದ್ರೆ, ಸತೀಶ್‌ ಜಾರಕಿಹೊಳಿಯವರು ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ.. ಸಿಎಂ ಘೋಷಣೆಗೆ ಯಾವುದೇ ವಿರೋಧ ವ್ಯಕ್ತಪಡಿಸದೇ ಸುಮ್ಮನೆ ಇದ್ದರು.. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ..
ಇನ್ನು ಸತೀಶ್‌ ಜಾರಕಿಹೊಳಿ ಅವರು ಪರವಾಗಿ ಕೂಗಿದ ಮುಂದಿನ ಸಿಎಂ ಘೋಷಣೆಯ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಈಗಾಗಲೇ ದಲಿತ ಸಿಎಂ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವಾಗಲೇ ಇಂತಹದ್ದೊಂದು ಘೋಷಣೆ ಹೊರಬಂದಿರುವುದು, ಈ ವೇಳೆ ಸತೀಶ್‌ ಜಾರಕಿಹೊಳಿಯವರು ಸಮ್ಮತಿ ಎಂಬಂತೆ ಸುಮ್ಮನಿದ್ದದ್ದರ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ..
ಸಮಾರಂಭಕ್ಕೂ ಮೊದಲು ಎಸ್‌ಎಸ್‌ಐಟಿ ಕ್ಯಾಂಪಸ್‌ನ ಅತಿಥಿಗೃಹದಲ್ಲಿ ಸತೀಶ್‌ ಜಾರಕಿಹೊಳಿ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.. ನಂತರ ಒಂದೇ ಕಾರಿನಲ್ಲಿ ಸಮಾರಂಭದ ಸ್ಥಳಕ್ಕೆ ಹೋದರು.. ಈ ಹಿಂದೆ ಕೂಡಾ ಹಲವು ಬಾರಿ ದಲಿತ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.. ಹೀಗಾಗಿ ಏನೋ ಸಮ್‌ಥಿಂಗ್‌ ನಡೆಯುತ್ತಿದೆ ಎಂಬ ಚರ್ಚೆಗಳು ಶುರುವಾಗಿದೆ..

 

Share Post