DistrictsHealth

3 ದಿನದಿಂದ ಒಂದೇ ಸ್ಥಳದಲ್ಲಿ ನಿಂತು ಪ್ರಾಣಬಿಟ್ಟ ಹೆಣ್ಣಾನೆ

ಹಾಸನ; ಕಾಡಾನೆಯೊಂದು ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಕಳೆದ ಮೂರು ದಿನಗಳಿಂದ ನಿಂತಲ್ಲೇ ನಿಂತಿತ್ತು.. ಇದೀಗ ಅದೇ ಆನೆ ನಿಂತ ಸ್ಥಳದಲ್ಲೇ ಸಾವನ್ನಪ್ಪಿದೆ.. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ವಣಗೂರು ಬಳಿ ಈ ಘಟನೆ ನಡೆದಿದೆ..
ಸಾವಿಗೀಡಾದ ಆನೆ ಹೆಣ್ಣಾನೆ ಎಂದು ತಿಳಿದುಬಂದಿದೆ.. ತುಂಬಾ ಬಡಕಲಾಗಿದ್ದ ಹೆಣ್ಣಾನೆ ಒಂದೇ ಸ್ಥಳದಲ್ಲಿ ನಿಂತಿತ್ತು.. ಮೂರು ದಿನಗಳಿಂದ ಕದಲದೇ ಹಾಗೆಯೇ ನಿಂತಿತ್ತು.. ಅನಾರೋಗ್ಯದ ಕಾರಣದಿಂದ ಅದು ಆಹಾರ ತಿನ್ನಲು ಆಗುತ್ತಿರಲಿಲ್ಲ.. ಅರಣ್ಯ ಇಲಾಖೆ ಅಧಿಕಾರಿಗಳು ಆ ಆನೆಗೆ ಚಿಕಿತ್ಸೆ ನೀಡಿ ಬದುಕಿಸಿಕೊಳ್ಳಲು ಮುಂದಾಗಿದ್ದರು.. ಆದ್ರೆ ಅಷ್ಟರಲ್ಲಾಗಲೇ ಆನೆ ಸಾವನ್ನಪ್ಪಿದೆ..
ಇಪ್ಪತ್ತು ವರ್ಷದ ಹೆಣ್ಣಾನೆ ಇದಾಗಿದೆ ಎಂದು ತಿಳಿದುಬಂದಿದೆ.. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ಅಲ್ಲೇ ಅಂತ್ಯಕ್ರಿಯೆ ನಡೆಸಲಾಗಿದೆ..

Share Post