ಆನ್‌ಲೈನ್‌ನಲ್ಲಿ ಐಫೋನ್ ಆರ್ಡರ್; ಹಣ ಕೊಡದೆ ಡೆಲಿವರಿ ಬಾಯ್‌ನ ಮರ್ಡರ್!
ಉತ್ತರಪ್ರದೇಶ; ಆನ್‌ಲೈನ್‌ನಲ್ಲಿ ಐಫೋನ್ ಆರ್ಡರ್ ಮಾಡಿ ತರಿಸಿಕೊಂಡ ವ್ಯಕ್ತಿಯೊಬ್ಬ ಹಣ ಕೊಡದೆ ಡೆಲಿವರಿ ಏಜೆಂಟ್‌ನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.. ಉತ್ತರ ಪ್ರದೇಶದ ರಾಜಧಾನಿ ಲಖನೌನ ನಿಶಾಂತ್ ಗಂಜ್‌ನಲ್ಲಿ ಈ ಘಟನೆ ನಡೆದಿದೆ..
ಗಜಾನನ ಎಂಬಾತ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಬುಕ್ ಮಾಡಿದ್ದ.. ಕ್ಯಾಶ್ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ.. ಡೆಲಿವರಿ ಬಾಯ್ ಕೊಟ್ಟಿದ್ದ ಅಡ್ರೆಸ್‌ಗೆ ಬಂದು ಐಫೋನ್ ಕೊಟ್ಟಿದ್ದಾನೆ.. ಫೋನ್ ಪಡೆದ ಆರೋಪಿ ಹಣ ಕೊಟ್ಟಿಲ್ಲ.. ಬದಲಾಗಿ ತನ್ನ ಸಹಚರರ ಜೊತೆ ಸೇರಿಕೊಂಡು ಡೆಲಿವರಿ ಬಾಯ್ ಭರತ್‌ನನ್ನು ಕೊಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ..
ಭರತ್ ಸಾಗುವನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪಿಗಳು ದೇಹವನ್ನು ಗೋಣಿಚೀಲಕ್ಕೆ ತುಂಬಿ ಕಾಲುವೆಗೆ ಎಸೆದು ಸುಮ್ಮನಾಗಿದ್ದಾರೆ.. ಎರಡು ದಿನಗಳಾದರೂ ಮನೆಗೆ ಬಾರದಿದ್ದಕ್ಕೆ ಡೆಲಿಬಾಯ್ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.. ಪೊಲೀಸರು ತನಿಖೆ ಶುರು ಮಾಡಿದ್ದು, ಆತನ ಕಾಲ್ ಡಿಟೇಲ್ಸ್ ಚೆಕ್ ಮಾಡಿದ್ದಾರೆ.. ಕೊನೆಯ ಬಾರಿಗೆ ಯಾರಿಗೆ ಕರೆ ಮಾಡಿದ್ದಾರೆ ಎಂದು ನೋಡಿದ್ದಾರೆ.. ಅದರ ಆಧಾರದ ಮೇಲೆ ಆರೋಪಿಗಳನ್ನು ಹಿಡಿಯಲಾಗಿದೆ..
ಶವ ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳ ಹೇಳಿದ ಕಾಲುವೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ..