NationalPolitics

ಗಣಿಧಣಿಗೆ ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ ಸಿಗ್ನಲ್‌!; ಜನಾರ್ದನರೆಡ್ಡಿ ಫುಲ್‌ ಖುಷ್‌!

ನವದೆಹಲಿ; ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಗಣಿಧಣಿ ಗಾಲಿ ಜನಾರ್ದನರೆಡ್ಡಿಗೆ ಸುಪ್ರೀಂಕೋರ್ಟ್‌ ಖುಷಿ ಸುದ್ದಿ ನೀಡಿದೆ.. ಜನಾರ್ದನರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ.. ಸರಿಸುಮಾರು 15 ವರ್ಷಗಳ ನಂತರ ಜನಾರ್ದನರೆಡ್ಡಿ ಬಳ್ಳಾರಿ ಭೇಟಿಗೆ ಅನುಮತಿ ಪಡೆದುಕೊಂಡಿದ್ದಾರೆ..
ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಜನಾರ್ದನರೆಡ್ಡಿಗೆ ಬಳ್ಳಾರಿ ಜಿಲ್ಲೆ ತೆರಳದಂತೆ ನಿರ್ಬಂಧ ಹೇರಲಾಗಿತ್ತು.. ಮಗಳ ಮದುವೆ ಸಂದರ್ಭದಲ್ಲಿ ವಿಶೇಷ ಅನುಮತಿ ಪಡೆದು ಬಳ್ಳಾರಿ ಪ್ರವೇಶ ಮಾಡಿದ್ದು ಬಿಟ್ಟರೆ ಅನಂತರ ಜನಾರ್ದನರೆಡ್ಡಿಗೆ ಬಳ್ಳಾರಿಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ.. ಹೀಗಾಗಿ ಬಳ್ಳಾರಿ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಅವರು ರಾಜಕೀಯ ನಡೆಸಿದ್ದರು.. ಇದೀಗ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ..
ಈ ಹಿಂದೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.. ಇದೀಗ ಪೂರ್ಣ ಅನುಮತಿ ನೀಡಲಾಗಿದೆ.. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಇದರಿಂದಾಗಿ ಇನ್ಮೇಲೆ ಗಾಲಿ ಜನಾರ್ದನ ರೆಡ್ಡಿಯವರು ಕೋರ್ಟ್‌ನ ಯಾವುದೇ ಪೂರ್ವಾನುಮತಿ ಪಡೆಯದೆ ಬಳ್ಳಾರಿಗೆ ತೆರೆಳಲು ಅವಕಾಶ ಒದಗಿಸಿದೆ.
ಈ ಹಿಂದೆ ಬಳ್ಳಾರಿಗೆ ತೆರಳಬೇಕಾದರೆ ಅಲ್ಲಿನ ಎಸ್‌ಪಿಗೆ ಮಾಹಿತಿ ನೀಡಬೇಕಾಗಿತ್ತು.. ಆದ್ರೆ ಈಗ ಪೂರ್ವಾನುಮತಿಯನ್ನು ತೆರವು ಮಾಡಿದೆ..

Share Post