DistrictsHealth

ದೇವರ ಉತ್ಸವದಲ್ಲಿ ಕುಣಿಯುತ್ತಿದ್ದಾಗ ಕುಸಿದುಬಿದ್ದು ಸಾವು!

ಚಾಮರಾಜನಗರ; ದೇವರ ಉತ್ಸವದ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕ್ತಿಯೊಬ್ಬರು ದಿಢೀರ್‌ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.. ಚಾಮರಾಜನಗರ ಬಳಿಯ ಮೂಡ್ನಾಕುಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಯುವಕರ ಜೊತೆ ಕುಣಿಯುತ್ತಿದ್ದಾಗ, ದಿಢೀರ್‌ ಹೃದಯಾಘಾತವಾಗಿ 42 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ..
ಮಾಡ್ನಾಕುಡು ಗ್ರಾಮದ ಕಲ್ಯಾಣ ಬಸವೇಶ್ವರ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ದೇವರ ಉತ್ಸವದ ವೇಳೆ ಡಿಜೆ ವ್ಯವಸ್ಥೆ ಮಾಡಲಾಗಿತ್ತು.. ಡಿಜೆ ಸೌಂಡ್‌ಗೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು.. 42 ವರ್ಷದ ಬಾಬು ಕೂಡಾ ಕೂಡಾ ಕುಣಿಯುತ್ತಿದ್ದರು.. ಇದೇ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ..

Share Post