ಇಲ್ಲಿ ಪೊಲೀಸರು ಕೋಣಗಳ ಮೇಲೆ ಸವಾರಿ ಮಾಡುತ್ತಾರೆ!
ಬ್ರೆಜಿಲ್; ಪೊಲೀಸರು ಜೀಪ್, ಕಾರು, ಬೈಕ್‌ಗಳಲ್ಲಿ ಓಡಾಡೋದನ್ನು ಎಲ್ಲಾ ಕಡೆ ನಾವು ನೋಡಿರುತ್ತೇನೆ.. ಆದ್ರೆ ಬ್ರೆಜಿಲ್ ನಗರವೊಂದರಲ್ಲಿ ಪೊಲೀಸರು ವಿಶೇಷವಾಗಿ ಎಂಟ್ರಿ ಕೊಡ್ತಾರೆ.. ಯಾಕಂದ್ರೆ ಇಲ್ಲಿ ಪೊಲೀಸರು ಕೋಣಗಳ ಮೇಲೆ ಗಸ್ತು ತಿರುಗುತ್ತಾರೆ.. ಎಲ್ಲಿಗೇ ಆದರೂ ಅವರು ಕೋಣ ಮೇಲೆಯೇ ಸವಾರಿ ಮಾಡುತ್ತಾರೆ..
ಬ್ರೆಜಿಲ್‌ನ ಪಾರ್ ರಾಜ್ಯದ ವ್ಯಾಪ್ತಿಯಲ್ಲಿರುವ ಮರಾಜೋ ದ್ವೀಪದಲ್ಲಿ ಪೊಲೀಸರು ಓಡಾಡಲು ಕೋಣಗಳನ್ನು ಬಳಸುತ್ತಾರೆ.. ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರ ಸೇರುವ ದಡದಲ್ಲಿ ಈ ಮರಾಜೋ ದ್ವೀಪ ಇದೆ.. ಈ ಮರಾಜೋ ದ್ವೀಪದ ಸೌರೆ ನಗರದಲ್ಲಿ 25 ಸಾವಿರ ಜನಸಂಖ್ಯೆ ಇದೆ.. ಇಲ್ಲಿ 200 ಮಿಲಿಟರಿ ಪೊಲೀಸ್ ಅಧಿಕಾರಿಗಳಿದ್ದು, ಇವರು ತಿರುಗಾಡಲು ಬೈಕ್‌ಗಳ ಜೊತೆಗೆ ಕೋಣಗಳನ್ನೂ ಬಳಸುತ್ತಾರೆ.
ಬಫೆಲೋ ಸೋಲ್ಜರ್ಸ್ ಆಫ್ ಮರಾಜೋ ಎಂಬ ಮಿಲಿಟರಿ ಪೊಲೀಸ್ ಘಟನೆ ಇಲ್ಲಿದೆ.. ಕೋಣಗಳ ಮೇಲೆ ವಿಶೇಷವಾಗಿ ಅಳವಡಿಸಿರುವ ಆಸನಗಳ ಮೇಲೆ ಕುಳಿತು ಸವಾರಿ ಮಾಡುತ್ತಾರೆ.. ಸುಮ್ಮನೆ ಇಲ್ಲಿ ಸವಾರಿಗೆ ಕೋಣಗಳನ್ನು ಬಳಸುತ್ತಿಲ್ಲ.. ಇದಕ್ಕೆ ಕಾರಣವೂ ಇದೆ.. ಯಾಕಂದ್ರೆ ಈ ಭಾಗ ಹೆಚ್ಚು ಜೌಗು ಪ್ರದೇಶ.. ಹೆಚ್ಚು ನೀರಿನಂಶ ಹಾಗೂ ಕೆಸರಿನಿಂದ ಕೂಡಿರುವ ಪ್ರದೇಶ.. ಹೀಗಾಗಿ ಇಲ್ಲಿ ಬೈಕ್ ಮತ್ತಿತರೆ ವಾಹನಗಳಲ್ಲಿ ಓಡಾಡೋದು ಕಷ್ಟವಾಗುತ್ತದೆ.. ಈ ಕಾರಣದಿಂದಾಗಿ ಕೋಣಗಳ ಮೇಲೆ ಇಲ್ಲಿ ಸವಾರಿ ಮಾಡಲಾಗುತ್ತದೆ.. ಭಾರತ, ಆಗ್ನೇಯ ಏಷ್ಯಾಕ್ಕೆ ಸ್ಥಳೀಯ ಪ್ರಾಣಿಯಾಗಿರುವ ಎಮ್ಮೆಗಳು ಮರಾಜೋ ದ್ವೀಪದ ಸಂಸ್ಕೃತಿ, ಆರ್ಥಿಕತೆಯಲ್ಲೂ ಆಳವಾಗಿ ಬೆರೆತುಹೋಗಿವೆ.