CrimeNational

ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಟೆನ್ನಿಸ್ ಆಟಗಾರ್ತಿ!

ಗುವಾಹಟಿ; ಟೆನ್ನಿಸ್ ಆಟಗಾರ್ತಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ.. ಇಬ್ಬರ ನಡುವೆ ಜಗಳ ನಡೆದಿದ್ದು ಈ ವೇಳೆ ಕುಟ್ಟಾನಿಯಿಂದ ಮಗಳು ಹೊಡೆದಿದ್ದು ಸಾವನ್ನಪ್ಪಿದ್ದಾಳೆ..

  ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ.. 40 ವರ್ಷದ ಮಂಜುದೇವಿ ಎಂಬಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ಮಂಜುದೇವಿ ಗಂಡ ಕೂಡಾ ಟೆನ್ನಿಸ್ ಕೋಚ್ ಆಗಿದ್ದು ಸಂಜೆ ಪ್ರಾಕ್ಟೀಸ್ ಗೆ ತೆರಳಿದ್ದ ವೇಳೆ ಮನೆಯಲ್ಲಿ ಈ ಘಟನೆ ನಡೆದಿದೆ..

 ದೀಪ್ ಚಂದ್‌ ಪ್ರಸಾದ್ ಟೆನ್ನಿಸ್ ಕೋಚ್ ಆಗಿದ್ದಾರೆ. ಇವರಿಗೆ ಒಬ್ಬಳೇ ಮಗಳು.. ಅಪ್ರಾಪ್ತ ಮಗಳು ಕೂಡಾ ಉದಯೋಣ್ಮುಖ ಟೆನ್ನಿಸ್ ಆಟಗಾರ್ತಿ.. ಅಪ್ಪ ಡ್ಯೂಟಿಗೆ ಹೋಗಿದ್ದ ವೇಳೆ ಗಲಾಟೆ ನಡೆದಿದ್ದು, ಈ ವೇಳೆ ಕುಪಿತಗೊಂಡು ಕುಟ್ಟಾಣಿಯಿಂದ ಮಂಜುದೇವಿಗೆ ಸಾಯುವವರೆಗೂ ಹೊಡೆದು ಕೊಂದೇ ಬಿಟ್ಟಿದ್ದಾಳೆ.

 ಪಕ್ಕದ ಮನೆಯವರು ಇದಂನ್ನಿ ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಪ್ರಾಪ್ತ ಮಗಳನ್ನು ಬಂಧಿಸಿದ್ದಾರೆ.

Share Post