ಸರ್ಕಾರಿ ಶಾಲೆಯಲ್ಲೇ ನಂಗಾನಾಚ್!; ಇದೆಂಥಾ ಸಂಸ್ಕೃತಿ..?
ಬಿಹಾರ; ಸಭೆ, ಸಮಾರಂಭ, ಮದುವೆ ಆರತಕ್ಷತೆ ಮುಂತಾದ ಸಂದರ್ಭದಲ್ಲಿ ಕೆಲವೊಂದು ಪ್ರದೇಶದಲ್ಲಿ ನಂಗಾನಾಚ್ ಕಾರ್ಯಕ್ರಮ ಏರ್ಪಡಿಸುತ್ತಾರೆ.. ಈ ಕಾರ್ಯಕ್ರಮದಲ್ಲಿ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡುತ್ತಾರೆ.. ಬಟ್ಟೆ ಬಿಚ್ಚಿ ಕುಣಿಯುತ್ತಾನೆ.. ಅರೆಬರೆ ಬಟ್ಟೆ ತೊಟ್ಟು ನರ್ತನೆ ಮಾಡುತ್ತಾರೆ.. ಇದು ಕಾನೂನು ಬಾಹಿರ ಹಾಗೂ ಅಸಹ್ಯ ಎನಿಸಿದರೂ ಅಲ್ಲಲ್ಲಿ ಇಂತಹ ಅನಿಷ್ಠಗಳು ನಡೆಯುತ್ತಲೇ ಇರುತ್ತವೆ. ಅದ್ರಲ್ಲೂ ಬಿಹಾರದಲ್ಲಿ ಶಾಲಾ ಆವರಣದಲ್ಲೇ ಇಂತಹದ್ದೊಂದು ನಾಂಗಾನಾಚ್ ಏರ್ಪಡಿಸಿ ಆಯೋಜಕರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
ಬಿಹಾರದ ಸಹಸ್ರಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹ ಅಸಭ್ಯ ನಂಗಾನಾಚ್ ಏರ್ಪಡಿಸಲಾಗಿತ್ತು.. ಆದ್ರೆ ಇದನ್ನು ಏರ್ಪಡಿಸಿದ್ದು ಶಾಲಾ ವಿದ್ಯಾರ್ಥಿಗಳಿಗಾಗಿ ಅಲ್ಲ ಅನ್ನೋದು ಸಮಾಧಾನದ ವಿಚಾರ.. ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು.. ಅದರ ಆರತಕ್ಷತೆಯ ಭಾಗವಾಗಿ ಸರ್ಕಾರಿ ಶಾಲೆ ಆವರಣದಲ್ಲಿ ಇಂತಹದ್ದೊಂದು ನಂಗಾನಾಚ್ ಏರ್ಪಡಿಸಲಾಗಿತ್ತು..
ಈ ಸರ್ಕಾರಿ ಪ್ರಾಥಮಿಕ ಶಾಲೆ ಪೊಲೀಸ್ ಠಾಣೆಯ ಹತ್ತಿರದಲ್ಲೇ ಇದೆ.. ಆದ್ರೆ ಪೊಲೀಸರು ನೋಡಿ ನೋಡದಂತೆ ಇದ್ದರು ಎನ್ನಲಾಗಿದೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ಸೋಷಿಯಲ್ ಮೀಡಿಯಾದಲ್ಲಿ ಜನ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..