HealthInternational

ಸೂಸೈಡ್‌ ಪಾಡ್‌ ಬಳಸಿ ಆತ್ಮಹತ್ಯೆ ಮಾಡಿಕೊಂಡ ಮೊದಲ ಮಹಿಳೆ!

ನ್ಯೂಯಾರ್ಕ್; ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ.. ಆದ್ರೆ ಕೆಲ ದೇಶಗಳಲ್ಲಿ ಕಾನೂನು ಪ್ರಕಾರವೇ ಆತ್ಮಹತ್ಯೆ ಮಾಡಿಕೊಳ್ಳಬಹುದು.. ಹೀಗಾಗಿ ಯಾವುದೇ ನೋವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಹಲವಾರು ವಿಧಾನಗಳನ್ನು ಕಂಡುಹಿಡಿಯಲಾಗಿದೆ.. ಇದರಲ್ಲಿ ಸೂಸೈಡ್‌ ಪಾಡ್‌ ಕೂಡಾ ಒಂದು.. ಈ ಸೂಸೈಡ್‌ ಪಾಡ್‌ನಲ್ಲಿ ಮಲಗಿ ಒಂದು ಬಟನ್‌ ಒತ್ತಿದರೆ ಸಾವನ್ನಪ್ಪುತ್ತಾರೆ.. ಹೀಗೆ ಸೂಸೈಡ್‌ ಪಾಡ್‌ ಬಳಸಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಸ್ವಿಟ್ಜರ್ಲೆಂಡ್‌ನಲ್ಲಿ ಅಮೆರಿಕದ 64 ವರ್ಷದ ಮಹಿಳೆಯೊಬ್ಬರು ಈ ಸೂಸೈಡ್‌ ಪಾಡ್‌ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಈ ಇಲ್ಲಿ ಆತ್ಮಹತ್ಯೆ ಕಾನೂನು ಬದ್ಧವಾಗಿದ್ದರೂ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ..
ಸ್ವಿಡ್ಜರ್ಲೆಂಡ್‌ನ ಜರ್ಮನಿ ಗಡಿಯಲ್ಲಿರುವ ಮೆರಿಚೌಸೆನ್‌ ಎಂಬ ಅರಣ್ಯ ಪ್ರದೇಶದಲ್ಲಿ ಸೂಸೈಡ್‌ ಪಾಡ್‌ ಇಡಲಾಗಿತ್ತು.. ಅದರಲ್ಲಿ 64 ವರ್ಷದ ಮಹಿಳೆ ಸೂಸೈಡ್‌ ಮಾಡಿಕೊಂಡಿದ್ದಾಳೆ..

Share Post