CinemaCrime

ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ರೇಪ್‌ ಕೇಸ್‌!

ಹೈದರಾಬಾದ್; ಬಡವರಿಗೆ ಕೋಟಿಗಟ್ಟಲೆ ಹಣ ಹಂಚುತ್ತಾ ಯೂಟ್ಯೂಬರ್‌ನಲ್ಲಿ ಭಾರೀ ಹೆಸರು ಗಳಿಸಿರುವ ತೆಲುಗಿನ ಖ್ಯಾತ ಯೂಟ್ಯೂಬರ್‌ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.. ತನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ, ನನ್ನನ್ನು ದರ್ಬಳಕೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಹರ್ಷ ಸಾಯಿ ವಿರುದ್ಧ ರೇಪ್‌ ಕೇಸ್‌ ದಾಖಲು ಮಾಡಿದ್ದಾಳೆ..
ಹರ್ಷ ಸಾಯಿ ನನನ್ನು ದೈಹಹಿಕ ಬಳಸಿಕೊಂಡಿದ್ದಾನೆ.. ಅದರ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾನೆ.. ಅದನ್ನಿಟ್ಟುಕೊಂಡು ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ ಎಮದು ಯುವತಿ ತೆಲಂಗಾಣದ ನರಸಿಂಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.. ಯುವತಿ ಮುಂಬೈ ಮೂಲದ ನಟಿ ಎಂದು ತಿಳಿದುಬಂದಿದೆ.. ಆಕೆ ಸಿನಿಮಾ ಅವಕಾಶಗಳನ್ನು ಅರಸಿ ಕೆಲ ವರ್ಷಗಳ ಹಿಂದೆ ಹೈದರಾಬಾದ್‌ಗೆ ಬಂದಿದ್ದಳು.. ತೆಲುಗು ಟಿವಿ ಒಂದರ ರಿಯಾಲಿಟಿ ಶೋನಲ್ಲಿ ಆಕೆ ಭಾಗವಹಿಸಿದ್ದಳು ಎಂದು ತಿಳಿದುಬಂದಿದೆ..
ಖಾಸಗಿ ಪಾರ್ಟಿಯೊಂದರಲ್ಲಿ ಯುವತಿ ಭಾಗಿಯಾಗಿದ್ದಳು.. ಈ ವೇಳೆ ಹರ್ಷ ಸಾಯಿ ಆಕೆಯ ಪರಿಚಯ ಆಗಿದ್ದಾಳೆ.. ಅನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಸಲುಗೆ ಹೆಚ್ಚಾಗಿದೆ.. ಅನಂತರ ಪ್ರೀತಿಯ ನಾಟಕವಾಡಿ, ಮದುವೆಯಾಗುತ್ತೇನೆ ಎಂದು ಹರ್ಷ ಸಾಯಿ ಹೇಳಿದ್ದ.. ನಂತರ ನನ್ನನ್ನು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ.. ಜೊತೆಗೆ ಪಲ್ಲಂಗದಲ್ಲಿದ್ದಾಗಿನ ವಿಡಿಯೋ, ಫೋಟೋಗಳನ್ನು ತೆಗೆದು ಬ್ಲ್ಯಾಕ್‌ ಮೇಲ್‌ ಕೂಡಾ ಮಾಡುತ್ತಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.. ಕೋಟ್ಯಂತರ ಹಣವನ್ನು ನನ್ನಿಂದ ಆತ ವಸೂಲಿ ಮಾಡಿದ್ದಾನೆ ಎಂದೂ ಆರೋಪ ಮಾಡಿದ್ದಾಳೆ..
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.. ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ಹಾಗೂ ಅವರ ತಂದೆ ರಾಧಕೃಷ್ಣ ವಿರುದ್ಧ ಯುವತಿ ಈ ಕೇಸ್‌ ದಾಖಲು ಮಾಡಿದ್ದಾಳೆ.. ಪೊಲೀಸರು ಯುವತಿಯನ್ನು ಕೊಂಡಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ..

 

Share Post