BengaluruPolitics

ದಸರಾಗೆ ಹೊಸ ಸಿಎಂ ಬರ್ತಾರಾ..?; ಸೋಷಿಯಲ್‌ ಮೀಡಿಯಾದಲ್ಲಿ ಇದೇ ಚರ್ಚೆ!

ಬೆಂಗಳೂರು; ಹೈಕೋರ್ಟ್‌ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ ಅನುಮತಿಯನ್ನು ಎತ್ತಿಹಿಡಿದಿದೆ.. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಶುರುವಾಗಿದೆ.. ಹೀಗಿರುವಾಗಲೇ ಸಿಎಂ ಬದಲಾಗ್ತಾರೆ ಅನ್ನೋದು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಟ್ರೆಂಡ್‌ ಆಗುತ್ತಿದೆ.. ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಬೇಡಿಕೆ ಕೋರ್ಟ್‌ ನಿರಾಕರಣೆ ಮಾಡಿದ ಬೆನ್ನಲ್ಲೇ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಚರ್ಚೆಗಳು ಶುರುವಾಗಿವೆ.. ಈ ನಡುವೆ ನೆಟ್ಟಿಗರು ಕೂಡಾ ದಸರಾಗೆ ಹೊಸ ಸಿಎಂ ಎಂದು ಮೀಮ್ಸ್‌ ಪೋಸ್ಟ್‌ ಮಾಡುತ್ತಿದ್ದಾರೆ..
ರಿಸೈನ್‌ ಸಿದ್ದರಾಮಯ್ಯ ಎನ್ನುವ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ವ್ಯಂಗ್ಯಭರಿತ ಪೋಸ್ಟ್‌ಗಳು ಹರಿದಾಡುತ್ತಿವೆ.. ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ.. ಆದ್ರೆ ಕೆಲವರಲ್ಲಿ ಆಸೆಯಂತೂ ಚಿಗುರಿದೆ.. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು, ಈ ವಿಷಯ ಟ್ರೆಂಡ್‌ ಆಗುತ್ತಿದೆ..

Share Post