LifestyleNational

ತಿರುಪತಿ ದೇವಸ್ಥಾನದ ಶುದ್ಧೀಕರಣ; ದೇಗುಲದಲ್ಲಿ ಯಾಗ, ಹೋಮ

ತಿರುಪತಿ; ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ಹಿನ್ನೆಲೆಯಲ್ಲಿ ಇಂದು ತಿರುಪತಿ ಶುದ್ಧೀಕರಣ ಕಾರ್ಯ ನೆರವೇರಿಸಲಾಯಿತು.. ಟಿಟಿಡಿ ಅರ್ಚಕರು ತಿಮ್ಮಪ್ಪನ ದೇವಾಲಯದ ಸುತ್ತ ಸಂಪ್ರೋಕ್ಷಣೆ ಮಾಡಿದರು.. ಹಾಲು, ತುಪ್ಪ, ಗಂಜಲ, ಮೊಸರು, ಸಗಣಿ ಸೇರಿದಂತೆ ಹಲವು ಪದಾರ್ಥಗಳನ್ನು ಬಳಸಿ ದೇವಾಲಯವನ್ನು ಶುದ್ಧೀಕರಣ ಮಾಡಲಾಯಿತು..
ದೇವಾಲಯದಲ್ಲಿ ಶುದ್ಧೀಕರಣ ಯಾಗ ನಡೆಸಲಾಗುತ್ತಿದೆ.. ಹೀಗಾಗಿ ಈ ವೇಳೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ.. ದೇಗುಲದ ಪವಿತ್ರ ಕಾರ್ಯ ಮುಗಿದ ಮೇಲೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಟಿಟಿಡಿ ಇಒ ಶ್ಯಾಮಲಾ ತಿಳಿಸಿದ್ದಾರೆ.. ಬೆಳಗ್ಗೆ 6 ಗಂಟೆಗೆ ದೇವಾಲಯದ ಶುದ್ಧೀಕರಣ ಹಾಗೂ ಮಹಾಶಾಂತಿ ಯಾಗ ನಡೆಸಲಾಯಿತು.. ವಿವಿಧ ಪಂಡಿತರು ಹಾಗೂ ವೇದಶಾಸ್ತ್ರದ ವಿದ್ವಾಂಸರು ಇದರ ನೇತೃತ್ವ ವಹಿಸಿಕೊಂಡಿದ್ದರು.. ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕರು, ಆಗಮ ಪಂಡಿತರಿಂದ ಪವಿತ್ರೋತ್ಸವ ನೆರವೇರಿಸಲಾಯಿತು.
ಹೋಮ, ಯಾಗ, ಶುದ್ಧೀಕರಣ ಮುಗಿದ ಮೇಲೆ ಇದರಲ್ಲಿ ಭಾಗಿಯಾಗಿದ್ದ ಅರ್ಚಕರನ್ನು ಟಿಟಿಡಿ ಬೀಳ್ಕೊಟ್ಟಿತು. ಮಹಾ ಶಕ್ತಿ ಹೋಮದ ಬಳಿಕ ಹೊಸ ಬಟ್ಟೆ, ಆಭರಣಗಳನ್ನ ಅರ್ಚಕರು ತಿಮ್ಮಪ್ಪನಿಗೆ ತೊಡಿಸಿದರು. ಶಾಸ್ತ್ರೋಕ್ತವಾಗಿ ಅರ್ಚಕರು ಶಾಂತಿ ಹೋಮ ನೆರವೇರಿಸಿದರು.

Share Post