CrimeNational

7 ವರ್ಷದ ಇಬ್ಬರು ಬಾಲಕರಿಂದ 7 ವರ್ಷದ ಬಾಲಕಿ ಮೇಲೆ ರೇಪ್‌!

ನವದೆಹಲಿ; ಏಳೆಂಟು ವರ್ಷದ ಇಬ್ಬರು ಬಾಲಕರು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕೊತ್ವಾಲಿ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ನಿರ್ಜನ ಪ್ರದೇಶಕ್ಕೆ ಆಟವಾಡಲೆಂದು ಬಾಲಕಿಯನ್ನು ಕರೆದೊಯ್ದಿರುವ ಏಳೆಂಟು ವರ್ಷದ ಬಾಲಕರು ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ..
ಇಬ್ಬರೂ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಿಮ್ಯಾಂಡ್‌ ಹೋಮ್‌ಗೆ ಕಳುಹಿಸಲಾಗಿದೆ.. ಬಾಲಕಿ ವಿರೋಧ ಮಾಡಿದರೂ ಇಬ್ಬರೂ ಬಾಲಕರು ಆಕೆ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾರೆ.. ಶುಕ್ರವಾರ ಮಧ್ಯಾಹ್ನ ಬಲ್ಲಿಯ ಕೊತ್ವಾಲಿ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ.. ಅತ್ಯಾಚಾರದ ನಂತರ ಬಾಲಕಿಗೆ ಇಬ್ಬರೂ ಬಾಲಕರು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.. ಹೀಗಾಗಿ ಆಕೆ ಯಾರಿಗೂ ಹೇಳಿರಲಿಲ್ಲ.. ಆದ್ರೆ ಕೃತ್ಯದಿಂದಾಗಿ ಬಾಲಕಿ ಭಯ ಬಿದ್ದಿದ್ದು, ಆಕೆಗೆ ವಿಪರೀತ ಜ್ವರ ಬಂದಿತ್ತು.. ಹೀಗಾಗಿ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.. ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ..
ಬಾಲಕಿಯನ್ನು ಈಗ ಬಲ್ಲಿಯಾ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ವಾರಣಾಸಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ..

Share Post