BengaluruCrime

ಅಶ್ರಫ್‌ ಕೊಲೆಗಾರ ಅಲ್ಲ!, ಸಾಕ್ಷ್ಯವೂ ಉಳಿದಿಲ್ಲ!; ಮಹಾಲಕ್ಷ್ಮೀ ಕೊಲೆ ಮಾಡಿದ್ದು ಯಾರು..?

ಬೆಂಗಳೂರು; ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣವನ್ನು ಬೇಧಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.. ಆರೋಪಿಯ ಪತ್ತೆಗೆ ಆರು ವಿಶೇಷ ತಂಡಗಳನ್ನು ರಚನೆ ಮಾಡಿದ್ದರೂ ಕೂಡಾ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ.. ಈ ನಡುವೆ ಕೊಲೆಗಾರ ತುಂಬಾ ಪ್ಲ್ಯಾನ್‌ ಮಾಡಿ ಈ ಕೊಲೆ ಮಾಡಿರುವುದು ಗೊತ್ತಾಗಿದೆ.. ವಿಧಿ ವಿಜ್ಞಾನ ತಜ್ಞರಿಗೆ ರಕ್ತದ ಕಲೆ ಸಿಗದಂತೆ ಕೊಲೆಗಾರ ಮಾಡಿದ್ದು, ಇದು ತನಿಖೆಗೆ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ..
ಮಹಾಲಕ್ಷ್ಮಿಯನ್ನು ಕೊಲೆ ಮಾಡಿ, 50ಕ್ಕೂ ಹೆಚ್ಚು ಪೀಸ್‌ ಮಾಡಿ ಫ್ರಿಡ್ಜ್‌ಗೆ ಇಟ್ಟಿರುವ ಆರೋಪಿ, ನಂತರ ಮನೆಯಲ್ಲಿ ಸಂಪೂರ್ಣವಾಗಿ ಸ್ವಚ್ಛ ಮಾಡಿದ್ದಾರೆ.. ರಕ್ತದ ಕಲೆ ಇಲ್ಲದಂತೆ ಸ್ವಚ್ಛಗೊಳಿಸಿದ್ದಾನೆ.. ಎಪ್‌ಎಸ್‌ಎಲ್‌ ತಜ್ಞರು ಎಷ್ಟು ಹುಡುಕಿದರೂ ರಕ್ತದ ಕಲೆಯಾಗಲೀ, ದೇಹ ಕತ್ತರಿಸಿದ ಪ್ರದೇಶದ ಗುರುತಾಗಲೀ ಸಿಕ್ಕಿಲ್ಲ.. ಕೊಲೆ ನಡೆದು 200 ದಿನಗಳಾದರೂ, ರಕ್ತದ ಕಲೆಗಳನ್ನು ಒರೆಸಿದ್ದರೂ ಎಫ್‌ಎಸ್‌ಎಲ್‌ ತಜ್ಞರು ಲುಮಿನಾಲ್‌ ಎಂಬ ಕೆಮಿಕಲ್‌ ಬಳಸಿ ರಕ್ತದ ಕಲೆಗಳನ್ನು ಕಂಡುಹಿಡಿಯುತ್ತಾರೆ.. ರಕ್ತವನ್ನು ಸ್ವಚ್ಛ ಮಾಡಿ ಒರೆಸಿದ್ದರೂ ಈ ಕೆಮಿಕಲ್‌ನಿಂದ ಕಲೆಗಳನ್ನು ಗುರುತಿಸಬಹುದು.. ಆದ್ರೆ ಇಲ್ಲಿ ಈ ಕೆಮಿಕಲ್‌ ಬಳಸಿದರೂ ರಕ್ತದ ಕಲೆಗಳು ಕಾಣಿಸುತ್ತಿಲ್ಲ.. ಆರೋಪಿ ಪ್ಲ್ಯಾನ್‌ ಮಾಡಿ ಕೊಲೆ ಮಾಡಲಾಗಿದ್ದು ಸಾಕ್ಷ್ಯ ನಾಶಕ್ಕಾಗಿ ಆತ ಕೂಡಾ ಯಾವುದೋ ಕೆಮಿಕಲ್‌ ಬಳಸಿ ರಕ್ತದ ಕಲೆಗಳನ್ನು ಅಳಿಸಿರಬಹುದು ಎಂದು ಶಂಕಿಸಲಾಗಿದೆ..
ಇನ್ನು ಮಹಾಲಕ್ಷ್ಮೀ ಗಂಡ ಆಕೆಯ ಬಾಯ್‌ಫ್ರೆಂಡ್‌ ಅಶ್ರಫ್‌ ಈ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದರು.. ಆದ್ರೆ ಪೊಲೀಸರು ಅಶ್ರಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.. ಮಹಾಲಕ್ಷ್ಮೀ ಜೊತೆ ನಾನು ಸಂಪರ್ಕದಲ್ಲಿದ್ದದ್ದು ನಿಜ.. ಆದ್ರೆ ನಾನು ಯಾವ ಕಾರಣಕ್ಕೂ ಕೊಲೆ ಮಾಡಿಲ್ಲ.. ಆಕೆಯ ಮನೆಯವರ ಜಗಳ ಆದ ಮೇಲೆ ನನಗೆ ಆಕೆಯ ಸಂಪರ್ಕವೇ ಇರಲಿಲ್ಲ.. ಆರು ತಿಂಗಳ ಹಿಂದೆಯೇ ನನಗೆ ಆಕೆಯ ಸಂಪರ್ಕ ಕಡಿದುಹೋಗಿದೆ ಎಂದು ಹೇಳಿದ್ದಾನೆ.. ಪೊಲೀಸರು ಆತನ ಮೊಬೈಲ್‌ ಪರಿಶೀಲನೆ ಮಾಡಿದಾಗಲೂ ಆರು ತಿಂಗಳಿಂದ ಮಹಾಲಕ್ಷ್ಮೀ ಜೊತೆ ಆತ ಮಾತನಾಡಿಲ್ಲ ಅನ್ನೋದು ಗೊತ್ತಾಗಿದೆ.. ಹೀಗಾಗಿ ಈ ಕೊಲೆ ಮಾಡಿರುವುದು ಅಶ್ರಫ್‌ ಅಲ್ಲ ಅನ್ನೋದು ಖಾತ್ರಿಯಾಗಿದೆ.. ಹೀಗಾಗಿ ಅಶ್ರಫ್‌ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ..
ಮಹಾಲಕ್ಷ್ಮೀಗೆ ಹಲವು ಹುಡುಗರು ಸ್ನೇಹಿತರಾಗಿದ್ದು, ಹಲವರ ಬಗ್ಗೆ ಅನುಮಾನ ಇದೆ.. ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಕೆಲವರ ಬಗ್ಗೆ ಆಕೆಯ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾನೆ.. ಹೀಗಾಗಿ ಅವರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಕೂಡಾ ನಡೆಸಿದ್ದಾರೆ.. ಆದ್ರೆ ಸದ್ಯ ಇನ್ನೂ ಕೊಲೆಗಾರ ಯಾರು ಅನ್ನೋದು ಗೊತ್ತಾಗಿಲ್ಲ..

Share Post