CrimeDistricts

ಬಾಲಕನ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!; ಮಂಗಳೂರಲ್ಲಿ ಇದೆಂಥಾ ವಿಕೃತಿ?

ಮಂಗಳೂರು; ವಿದ್ಯಾರ್ಥಿಗಳು ತಮಾಷೆ ಮಾಡಲು ವಿದ್ಯಾರ್ಥಿಯೊಬ್ಬನಿಗೆ ಸಂಕಷ್ಟ ತಂದೊಡ್ಡಿದ್ದಾರೆ.. ವಸತಿನಿಲಯದಿಂದ ಶಾಲೆಗೆ ಹೋಗುತ್ತಿದ್ದ ಬಾಲಕನೊಬ್ಬನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದಿದ್ದಾರೆ.. ಇದರಿಂದಾಗಿ ಬಾಲಕನ ಮರ್ಮಾಂಗ ಊದಿಕೊಂಡಿದ್ದು, ತೀವ್ರ ಸಂಕಷ್ಟ ಅನುಭವಿಸಿದ್ದಾನೆ.. ಸದ್ಯ ಬಾಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.. ಮಂಗಳೂರಿನ ಆರಂತೋಡು ಎಂಬಲ್ಲಿ ಈ ಘಟನೆ ನಡೆದಿದೆ..
ಸೆಪ್ಟೆಂಬರ್‌ 14ರಂದು ಇಬ್ಬರು ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು.. ಇದಾದ ಮೇಲೆ ಆ ಬಾಲಕನಿಗೆ ಮೂತ್ರ ವಿಸರ್ಜನೆ ಮಾಡಲಾಗದೆ ತುಂಬಾ ತೊಂದರೆಯಾಗಿದೆ.. ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾನೆ.. ಹೀಗಾಗಿ ಬಾಲಕನ ತಾಯಿ ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.. ಅನಂತರ ಮಂಗಳೂರಿನ ವನ್ಲಾಕ್‌ ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಲಾಗಿದೆ.. ಸದ್ಯ ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ..

Share Post