CrimeDistricts

ಕೋರ್ಟ್‌ನಲ್ಲಿ ಹೋರಾಡಿ ಅರ್ಧ ರಸ್ತೆ ವಾಪಸ್‌ ಪಡೆದ ಭೂಮಾಲೀಕ!

ಬೆಳಗಾವಿ; ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರ ಜಾಗವನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ.. ಅದೇ ರೀತಿ ಬೆಳಗಾವಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಖಾಸಗಿ ಜಾಗಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು.. ಆದ್ರೆ ವ್ಯಕ್ತಿಯೊಬ್ಬರು ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿ, ತನ್ನ ಜಾಗವನ್ನು ವಾಪಸ್‌ ದಕ್ಕಿಸಿಕೊಂಡಿದ್ದಾರೆ.. ಈ ಮೂಲಕ ನಿರ್ಮಾಣವಾಗಿದ್ದ ರಸ್ತೆಗೆ ಬೇಲಿ ಹಾಕಿಕೊಂಡಿದ್ದಾರೆ..
ಬೆಳಗಾವಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ನಡೆಯುತ್ತಿವೆ.. ಅದೇ ರೀತಿ ನಗರದಲ್ಲಿ ಡಬಲ್‌ ರೋಡ್‌ ನಿರ್ಮಾಣಕ್ಕಾಗಿ ಖಾಸಗಿ ಸ್ವತ್ತುಗಳನ್ನು ಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗಿತ್ತು.. ಆದ್ರೆ ಇದರ ವಿರುದ್ಧ ಸಾರ್ವಜನಿಕರು ಕಾನೂನು ಹೋರಾಟ ಶುರು ಮಾಡಿದ್ದರು.. ಅದರಲ್ಲೂ ಕೂಡಾ ಬೆಳಗಾವಿಯ ಬಾಳಾಸಾಹೇಬ ಎಂಬುವವರು ಸ್ವಾಧೀನಪಡಿಸಿಕೊಂಡ ನಮ್ಮ ಜಾಗವನ್ನು ವಾಪಸ್‌ ಕೊಡಬೇಕೆಂದು ಅವರು ಕೋರ್ಟ್‌ ಮೊರೆ ಹೋಗಿದ್ದರು.. ಹೈಕೋರ್ಟ್‌ ಈಗ ಅವರ ಪರವಾಗಿ ತೀರ್ಪು ಕೊಟ್ಟಿದೆ..
ಈ ಬಗ್ಗೆ ಆದೇಶ ನೀಡಿರುವ ಧಾರವಾಡ ಹೈಕೋರ್ಟ್‌ ಪೀಠ, ನಿರ್ಮಾಣವಾದ ರಸ್ತೆಯ ಅರ್ಧ ಭಾಗದಷ್ಟು ಸ್ಥಳವನ್ನು ಭೂಮಾಲೀಕರಾದ ಬಾಳಾಸಾಹೇಬ್‌ ಅವರಿಗೆ ನೀಡಬೇಕೆಂದು ಆದೇಶ ನೀಡಿದೆ.. ಈ ಹಿನ್ನೆಲೆಯಲ್ಲಿ ಭೂಮಾಲೀಕರು ಅರ್ಧ ರಸ್ತೆಗೆ ಬೇಲಿ ಹಾಕಿದ್ದಾರೆ..

Share Post