BengaluruCrime

ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌!

ಬೆಂಗಳೂರು; ಜಾತಿ ನಿಂದನೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಬೇಲ್‌ ಪಡೆದಿದ್ದ ಆರ್‌ಆರ್‌ ನಗರ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಅರೆಸ್ಟ್‌ ಆಗಿದ್ದಾರೆ.. ಅತ್ಯಾಚಾರ ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಬಳಿ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ..
ಬಿಬಿಎಂಪಿ ಗುತ್ತಿಗೆದಾರರಿಗೆ ಬೆದರಿಕೆ ಹಾಗೂ ಜಾತಿ ನಿಂದನೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ ದಾಖಲಾಗಿತ್ತು.. ಈ ಸಂಬಂಧ ಶನಿವಾರ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು.. ಆದ್ರೆ ನಿನ್ನೆ ಎರಡೂ ಪ್ರಕರಣಗಳಿಗೂ ಜಾಮೀನು ಸಿಕ್ಕಿದ್ದರಿಂದ ಅವರನ್ನು ಇಂದು ಬೆಳಗ್ಗೆ ಬಿಡಗಡೆ ಮಾಡಲಾಯಿತು.. ಆದ್ರೆ ನಿನ್ನೆಯೇ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ ಮಾಡಿರುವ ಕೇಸ್‌ ದಾಖಲಿಸಿದ್ದಾರೆ… ಈ ಹಿನ್ನೆಲೆಯಲ್ಲಿ ಕಗ್ಗಲೀಪುರ ಪೊಲೀಸರು ಮುನಿರತ್ನ ಅವರನ್ನು ಮತ್ತೆ ಬಂಧಿಸಿದ್ದು, ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ..
ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಶಾಸಕ ಮುನಿರತ್ನ ಅವರನ್ನು ಬಂಧಿಸಿದೆ.. 7 ಪೊಲೀಸ್‌ ಜೀಪುಗಳು, ಒಂದು ಪೊಲೀಸ್‌ ಮೀಸಲು ಪಡೆಯ ವಾಹನದ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರದಲ್ಲಿ ಮುನಿರತ್ನ ಅವರನ್ನು ಬಂಧಿಸಿ ಕೊರೆದೊಯ್ಯಲಾಯಿತು.. ಶಾಸಕರಿಗೆ ವೈದ್ಯಕೀಯ ತಪಾಸಣೆ ನಡೆಸಿ ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದಾರೆ.. ಸಂಜೆ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ಮಹಿಳೆ ಕಗ್ಗಲೀಪುರ ಠಾಣೆಯಲ್ಲಿ ನೀಡಿದ ದೂರಿನ ವಿವರದ ಸುದ್ದಿ ಇಲ್ಲಿದೆ;
ರಾಮನಗರ; ಬಿಬಿಎಂಪಿ ಗುತ್ತಿಗೆದಾರರನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿರುವ ಆರ್‌ಆರ್‌ ನಗರ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.. ನನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಹನಿಟ್ರ್ಯಾಪ್‌ ಗೂ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ.. ಈ ಸಂಬಂಧ ರಾಮನಗರ ಎಸ್‌ಪಿಗೆ ಮಹಿಳೆ ದೂರು ನೀಡಿದ್ದಾರೆ..
ಸಮಾಜಸೇವಕಿಯಾಗಿ ಗುರುತಿಸಿಕೊಂಡಿರುವ ಹಾಗೂ ಬಿಜೆಪಿ ಕಾರ್ಯಕರ್ತೆಯೂ ಆಗಿರುವ 40 ವರ್ಷದ ಮಹಿಳೆ ಈ ಆರೋಪ ಮಾಡಿದ್ದಾರೆ.. ಈ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಶಾಸಕ ಮುನಿರತ್ನ, ಶಾಸಕರ ಗನ್‌ಮ್ಯಾನ್‌ ವಿಜಯಕುಮಾರ್, ಸುಧಾಕರ್, ಕಿರಣ್‌ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ‌ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.. ಈ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಇಷ್ಟರಲ್ಲೇ ಬಿಡುಗಡೆಯಾಗೋದು ಕಷ್ಟ ಎಂದು ಹೇಳಲಾಗುತ್ತಿದೆ..
ನಿನ್ನೆ ಮಧ್ಯಾಹ್ನ ಮಹಿಳೆ ರಾಮನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು.. ಈ ವೇಳೆ ಪೊಲೀಸರು ಮಹಿಳೆಯನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ.. ಕೃತ್ಯ ನಡೆದ ಸ್ಥಳ ಕಗ್ಗಲೀಪುರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುತ್ತದೆ ಅಲ್ಲಿಗೇ ಹೋಗಿ ದೂರು ಕೊಡುವಂತೆ ಸೂಚಿಸಿದ್ದಾರೆ.. ಈ ಹಿನ್ನೆಲೆಯಲ್ಲಿ ಕಗ್ಗಲೀಪುರ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದ ಮಹಿಳೆ ತನ್ನ ಮೇಲೆ 2020 ರಿಂದ 2022ರವರೆಗೆ ಅತ್ಯಾಚಾರ ನಡೆಸಲಾಗಿದ್ದು, ಹನಿಟ್ರ್ಯಾಪ್‌ಗೂ ಬಳಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದಾರೆ..
ಕೋವಿಡ್‌ ಸಂದರ್ಭದಲ್ಲಿ ಮುನಿರತ್ನ ಅವರು ನನಗೆ ಕರೆ ಮಾಡಿದ್ದರು.. ನಾನು ನಿಮ್ಮ ಕ್ಷೇತ್ರದ ಶಾಸಕ, ನಿಮ್ಮ ಬಗ್ಗೆ ನಾನು ಕೇಳಿದ್ದೇನೆ.. ನನ್ನನ್ನು ಬಂದು ಭೇಟಿಯಾಗಿ ಎಂದು ಹೇಳಿದ್ದರು.. ಅದರಂತೆ ನಾನು ಭೇಟಿಯಾಗಿದ್ದೆ.. ಅಂದಿನಿಂದ ನಮ್ಮ ಆತ್ಮೀಯತೆ ಬೆಳೆಯಿತು.. ಶಾಸಕರು ಆಗಾಗ ವಿಡಿಯೋ ಕಾಲ್‌ ಮಾಡಿ ಮಾತನಾಡುತ್ತಿದ್ದರು.. ಈ ವೇಳೆ ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದ್ದರು.. ಆದ್ರೆ ಅದಕ್ಕೆ ನಾನು ನಿರಾಕರಣೆ ಮಾಡಿದ್ದೆ.. ಕೆಲ ದಿನಗಳ ನಂತರ ನಿಮ್ಮಿಂದ ಒಂದು ಸಹಾಯವಾಗಬೇಕು ಎಂದು ಸ್ಥಳವೊಂದಕ್ಕೆ ಕರೆಸಿಕೊಂಡಿದ್ದರು.. ನಿಮ್ಮ ನೋಡಿದರೆ ಮೈ ಜುಮ್ಮೆನ್ನುತ್ತದೆ ಎಂದು ಹೇಳುತ್ತಾ ತಬ್ಬಿಕೊಳ್ಳಲು ಮುಂದಾದರು. ಆಗ ನಾನು ಆಕ್ಷೇಪ ವ್ಯಕ್ತಪಡಿಸಿದರು.. ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್‌ ಎಂದು ಮುಂದುವರೆದರು. ನಾನು ಕಿರುಚಿಕೊಳ್ಳುತ್ತೇನೆ ಎಂದು ಹೇಳಿದಾಗ, ನನಗೆ ಅಪಾರ ಜನಬಲವಿದೆ. ನಾನು ನಿನ್ನ ವಿರುದ್ಧವೇ ಕಂಫ್ಲೇಂಟ್‌ ಕೊಡುತ್ತೇನೆ.. ಸುಮ್ಮನಿದ್ದರೆ ಸರಿ ಎಂದು ಬೆದರಿಸಿದರು ಎಂದು ಮಹಿಳೆ ದೂರಿನಲ್ಲಿ ಗೋಳು ತೋಡಿಕೊಂಡಿದ್ದಾಳೆ..
ಈ ವಿಷಯ ಯಾರಿಗೂ ಹೇಳಬೇಡ ಎಂದು ಬೆದರಿಸಿದ್ದರು.. ಇಲ್ಲಿ ಕ್ಯಾಮರಾ ಅಳವಡಿಸಿದ್ದೇನೆ. ಎಲ್ಲವೂ ಕೂಡಾ ರೆಕಾರ್ಡ್‌ ಮಾಡಲಾಗಿದೆ ಎಂದು ಟಿವಿಯಲ್ಲಿ ಹಾಕಿ ನನಗೆ ತೋರಿಸಿದ್ದರು.. ವಿಡಿಯೋ ಇಟ್ಟುಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.. ಇದರ ಜೊತೆಗೆ ವಿಡಿಯೋಗಳನ್ನು ನಿನ್ನ ಗಂಡ, ಮಕ್ಕಳಿಗೆ ತೋರಿಸುತೇನೆ ಎಂದು ಬೆದರಿಕೆ ಕೂಡಾ ಹಾಕಿದ್ದರು.. ಹೀಗೆಯೇ ನನ್ನನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಮತ್ತೊಬ್ಬ ಮಹಿಳೆ ಜತೆ ಸೇರಿ ಶಾಸಕ ಹೇಳಿದವರನ್ನು ಹನಿಟ್ರ್ಯಾಪ್‌ ಮಾಡಿಸಿದ್ದರು.. ಮಾನಮರ್ಯಾದೆಗೆ ಅಂಜಿ ನಾನು ಶಾಸಕ ಹೇಳಿದ ಕೆಲಸಗಳನ್ನಲ್ಲೇ ಮಾಡಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ..

ಈ ವಿಷಯ ಯಾರಿಗೂ ಹೇಳಬೇಡ ಎಂದು ಬೆದರಿಸಿದ್ದರು.. ಇಲ್ಲಿ ಕ್ಯಾಮರಾ ಅಳವಡಿಸಿದ್ದೇನೆ. ಎಲ್ಲವೂ ಕೂಡಾ ರೆಕಾರ್ಡ್‌ ಮಾಡಲಾಗಿದೆ ಎಂದು ಟಿವಿಯಲ್ಲಿ ಹಾಕಿ ನನಗೆ ತೋರಿಸಿದ್ದರು.. ವಿಡಿಯೋ ಇಟ್ಟುಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.. ಇದರ ಜೊತೆಗೆ ವಿಡಿಯೋಗಳನ್ನು ನಿನ್ನ ಗಂಡ, ಮಕ್ಕಳಿಗೆ ತೋರಿಸುತೇನೆ ಎಂದು ಬೆದರಿಕೆ ಕೂಡಾ ಹಾಕಿದ್ದರು.. ಹೀಗೆಯೇ ನನ್ನನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಮತ್ತೊಬ್ಬ ಮಹಿಳೆ ಜತೆ ಸೇರಿ ಶಾಸಕ ಹೇಳಿದವರನ್ನು ಹನಿಟ್ರ್ಯಾಪ್‌ ಮಾಡಿಸಿದ್ದರು.. ಮಾನಮರ್ಯಾದೆಗೆ ಅಂಜಿ ನಾನು ಶಾಸಕ ಹೇಳಿದ ಕೆಲಸಗಳನ್ನಲ್ಲೇ ಮಾಡಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ..

Share Post