ಲೋಕಸಭೆಯಲ್ಲೂ ಪ್ರತಿಧ್ವನಿಸಿದ ರಮೇಶ್ಕುಮಾರ್ ರೇಪ್ ವಿವಾದ
ನವದೆಹಲಿ: ನಿನ್ನೆ ವಿಧಾನಸಭೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆ ಲೋಕಸಭೆಯಲ್ಲೂ ಪ್ರತಿಧ್ವನಿಸಿತು. ಮಹಿಳಾ ಸದಸ್ಯರು, ಭಿತ್ತಪತ್ರಗಳನ್ನು ಹಿಡಿದು ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸಿದರು. ಸ್ಮೃತಿ ಇರಾನಿ ಸೇರಿದಂತೆ ಹಲವು ಮಹಿಳಾ ಸದಸ್ಯರು, ಲೋಕಸಭೆಯಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧವೂ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಬೇಕಾದ ಸಂದರ್ಭದಲ್ಲಿ ರಮೇಶ್ಕುಮಾರು ಅವರು, ಮಹಿಳೆ ಮೇಲೆ ಅತ್ಯಾಚಾರದ ಪ್ರಸಂಗವನ್ನು ಪ್ರಸ್ತಾಪಿಸಿ ಮಾತನಾಡಿದ್ದರು. ಇದಕ್ಕೆ ರಾಜ್ಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಬೆನ್ನಲ್ಲೇ ರಮೇಶ್ ಕುಮಾರ್, ಟ್ವೀಟ್ ಮೂಲಕ ಕ್ಷಮೆಯಾಚಿಸಿದರು. ಅನಂತರ ವಿಧಾನಸಭಾ ಕಲಾಪದಲ್ಲೂ ಕ್ಷಮೆಯಾಚಿಸಿ, ವಿವಾದಕ್ಕೆ ತೆರೆ ಎಳೆದರು.
ರಮೇಶ್ ಕುಮಾರ್ ಕ್ಷಮೆಯಾಚನೆಯ ನಂತರವೂ ಆಕ್ರೋಶಗಳು ವ್ಯಕ್ತವಾಗುತ್ತಲೇ ಇವೆ. ಲೋಕಸಭೆಯಲ್ಲಿ ಕೂಡಾ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ.