CrimeNational

ಜ್ಯೂಸ್‌ನಲ್ಲಿ ಮೂತ್ರ ಮಿಕ್ಸ್ ಮಾಡುತ್ತಿದ್ದ ಅಂಗಡಿ ಮಾಲೀಕ; ಗೊತ್ತಾಗಿದ್ದು ಹೇಗೆ..?

ಗಾಜಿಯಾಬಾದ್‌; ಜನರು ಆರೋಗ್ಯಕ್ಕೆ ಒಳ್ಳೆಯದು ಎಂದು ತಾಜಾ ಹಣ್ಣಿನ ಪಾನೀಯಗಳನ್ನು ಕುಡಿಯುತ್ತಾರೆ.. ಹೊರಗಡೆ ಹೋದಾಗ ಊಟಕ್ಕೆ ಬದಲಾಗಿ ಕೆಲವರು ಅಂಗಡಿಗಳಲ್ಲಿ ಜ್ಯೂಸ್‌ ಕುಡಿಯುವುದೇ ಹೆಚ್ಚು.. ಆದ್ರೆ ಕೆಲ ಹಣ್ಣಿನ ಜ್ಯೂಸ್‌ ಅಂಗಡಿಯವರು ಮಾಡವ ಅವಾಂತರ ನೋಡಿದರೆ ಅಸಹ್ಯ ಹುಟ್ಟಿಸುತ್ತದೆ.. ಇಲ್ಲೊಬ್ಬ ಜ್ಯೂಸ್‌ ಅಂಗಡಿಯಾತ ತಾಜಾ ಹಣ್ಣಿನ ಜ್ಯೂಸ್‌ ಗೆ ಮೂತ್ರ ಬೆರೆಸಿ ಗ್ರಾಹಕರಿಗೆ ಕೊಡುತ್ತಿದ್ದನಂತೆ.. ಈ ಸಂಬಂಧ ಬಂದ ದೂರಿನ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ನಲ್ಲಿ ಜ್ಯೂಸ್‌ ಅಂಗಡಿ ಮಾಲೀಕ ಹಾಗೂ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ..
ಅಮೀರ್‌ ಖಾನ್‌ ಎಂಬ ಜ್ಯೂಸ್‌ ಅಂಗಡಿ ಮಾಲೀಕನೇ ಬಂಧಿತ ಆರೋಪಿಯಾಗಿದ್ದಾನೆ.. ಈತ ತನ್ನ ತಾಜಾ ಹಣ್ಣಿನ ಜ್ಯೂಸ್‌ ಅಂಗಡಿಯಲ್ಲಿ ಜ್ಯೂಸ್‌ನಲ್ಲಿ ಹಳದಿ ಬಣ್ಣದ ದ್ರವವನ್ನು ಮಿಕ್ಸ್‌ ಮಾಡುವುದನ್ನು ಗ್ರಾಹಕರು ನೋಡಿದ್ದಾರೆ.. ಈ ಬಗ್ಗೆ ಅವರಿಗೆ ಅನುಮಾನ ಬಂದಿದೆ.. ದೊಡ್ಡ ಮಟ್ಟದಲ್ಲಿ ಗ್ರಾಹಕರು ಸೇರಿ ಗ್ರಾಹಕನನ್ನು ಥಳಿಸಿದ್ದಾರೆ.. ಇದೇ ವೇಳೆ ಅಂಗಡಿಯಲ್ಲಿ ಮೂತ್ರದ ಕ್ಯಾನ್‌ ಪತ್ತೆಯಾಗಿದೆ.. ಗ್ರಾಹಕರು ನೀಡಿರುವ ದೂರಿನ ಪ್ರಕಾರ, ಮನುಷ್ಯರ ಮೂತ್ರವನ್ನು ಕ್ಯಾನ್‌ನಲ್ಲಿ ಸಂಗ್ರಹ ಮಾಡಿ, ಅದನ್ನು ಜ್ಯೂಸ್‌ನಲ್ಲಿ ಸ್ವಲ್ಪ ಸ್ವಲ್ಪ ಮಿಕ್ಸ್‌ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.. ಮಾಲೀಕ ಅಮೀರ್‌ ಖಾನ್‌ ಜೊತೆ ಒಬ್ಬ ಬಾಲಕಾರ್ಮಿಕನನ್ನೂ ಬಂಧಿಸಲಾಗಿದೆ..

ಸಿಎಂ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಕೇಜ್ರಿವಾಲ್‌

Share Post