ಶಾಸಕ ಮುನಿರತ್ನ ವಿರುದ್ಧ ಎರಡು ಎಫ್‌ಐಆರ್ ದಾಖಲು!
ಬೆಂಗಳೂರು; ಆರ್‌ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಿಸಲಾಗಿದೆ.. ಪೊಲೀಸರು ಶಾಸಕ ಮುನಿರತ್ನಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.. ಇದರಿಂದಾಗಿ ಶಾಸಕರಿಗೆ ಕಾನೂನು ಸಂಕಷ್ಟ ಎದುರಾಗಿದೆ..
ಬಿಬಿಎಂಪಿ ಗುತ್ತಿಗೆ ಚಲುವರಾಜು ಎಂಬುವವರು ನಿನ್ನೆ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದರು.. ಶಾಸಕರು 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.. ಇದರ ಜೊತೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.. ಈ ಬಗ್ಗೆ ಪೊಲೀಸರಿಗೆ ದೂರು ಕೂಡಾ ನೀಡಲಾಗಿತ್ತು.. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಎರಡು ಕೇಸ್ ದಾಖಲು ಮಾಡಲಾಗಿದೆ..
ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.. ಈ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರು ಎ1 ಆರೋಪಿಯಾಗಿದ್ದರೆ, ಅವರ ಆಪ್ತ ಸಹಾಯಕ ವಿಜಯ್‌ಕುಮಾರ್ ಎ2, ಸೆಕ್ಯೂರಿಟಿ ಗಾರ್ಡ್ ಅಭಿಷೇಕ್ ಎ3 ಹಾಗೂ ವಸಂತ್‌ಕುಮಾರ್ ಎಂಬುವವರು ಎ4 ಆರೋಪಿಯಾಗಿದ್ದಾರೆ..