CrimeNational

ಪ್ರಿಯಕರನ ಜೊತೆ 3 ಮಕ್ಕಳ ತಾಯಿ ಎಸ್ಕೇಪ್‌!; ಮುಂದೇನಾಯ್ತು..?

ಬಿಹಾರ; ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿದ್ದ ವ್ಯಕ್ತಿ ಜೊತೆ ಮಹಿಳೆಯೊಬ್ಬರು ತನ್ನ ಮೂರು ಮಕ್ಕಳೊಂದಿಗೆ ಎಸ್ಕೇಪ್‌ ಆಗಿದ್ದರು.. ಕಳೆದ ಜೂನ್‌ನಲ್ಲಿ ನಾಪತ್ತೆಯಾಗಿದ್ದ ಮಹಿಳೆ ಈಗ ಗಂಡನ ಮೊಬೈಲ್‌ಗೆ ಬಂದ ಒಂದು ಮೆಸೇಜ್‌ನಿಂದ ಸಿಕ್ಕಿಬಿದ್ದಿದ್ದಾಳೆ.. ಮಕ್ಕಳು ಕೂಡಾ ಈಗ ಸೇಫಾಗಿ ಅಪ್ಪನ ಮಡಿಲು ಸೇರಿದ್ದಾರೆ.. ಬಿಹಾರದ ರೋಹ್ವಾಸ್‌ ಜಿಲ್ಲೆಯ ಶಿವಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಾನಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ಜೂನ್‌ನಲ್ಲಿ ಕೃಷ್ಣಪ್ರಸಾದ್‌ ಪ್ರಜಾಪತಿ ಎಂಬುವವರ ಪತ್ನಿ ತನ್ನ ಮೂವರು ಮಕ್ಕಳೊಂದಿಗೆ ಓಡಿಹೋಗಿದ್ದಳು.. ಆಗ ಹೆಂಡತಿ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪ್ರಜಾಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.. ಆದ್ರೆ ಪೊಲೀಸರು ಹುಡುಕಾಡಿದರೂ ಅವರು ಸಿಕ್ಕಿರಲಿಲ್ಲ.. ಇತ್ತ ಗುಜರಾತ್‌ನ ಸೂರತ್‌ಗೆ ಹೋಗಿ ಪ್ರಿಯಕರನ ಜೊತೆ ವಾಸವಿದ್ದ ಹೆಂಡತಿ, ಅಲ್ಲಿ ಜವಳಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು.. ಅಲ್ಲಿ ಸಂಬಳಕ್ಕೆ ಅಂತ ಒಂದು ಬ್ಯಾಂಕ್‌ ಅಕೌಂಟ್‌ ನೀಡಿದ್ದಳು.. ಆದ್ರೆ ಆ ಅಕೌಂಟ್‌ಗೆ ಗಂಡನ ಮೊಬೈಲ್‌ ನಂಬರ್‌ ಲಿಂಕ್‌ ಆಗಿದೆ ಎಂದು ಆಕೆಗೆ ಗೊತ್ತಿರಲಿಲ್ಲ.. ಸಂಬಳ ಕ್ರೆಡಿಟ್‌ ಆದಾಗ ಗಂಡನಿಗೆ ಮೆಸೇಜ್‌ ಹೋಗಿದೆ.. ಇದರಿಂದಾಗಿ ಆಕೆ ಎಲ್ಲಿದ್ದಾಳೆ ಅನ್ನೋದು ಪ್ರಜಾಪತಿಗೆ ಗೊತ್ತಾಗಿದೆ.. ಕೂಡಲೇ ಅಲ್ಲಿಗೆ ಹೋದಾಗ ಹೆಂಡತಿ ಹಾಗೂ ಮಕ್ಕಳು ಸಿಕ್ಕಿದ್ದಾರೆ.. ಹೆಂಡತಿ ಬೇರೊಬ್ಬನ ಜೊತೆ ಸಂಸಾರ ನಡೆಸುತ್ತಿರುವುದೂ ಗೊತ್ತಾಗಿದೆ..

29 ವರ್ಷದ ಅನಿತಾ ದೇವಿ, 12 ವರ್ಷದ ಮಗಳು ಪ್ರಿಯಾಂಕಾ, 8 ವರ್ಷದ ಮಗಳು ವಿಭಾ ಮತ್ತು 6 ವರ್ಷದ ಮಗ ಶಶಿಕಾಂತ್ ನಾಪತ್ತೆಯಾಗಿದ್ದವು.. ಪ್ರಜಾಪತಿ ಪತ್ನಿ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.. ಈ ವೇಳೆ ಅಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಬೆಳೆಸಿದ್ದಳು.. ಆತನ ಜೊತೆಗೇ ಆಕೆ ಎಸ್ಕೇಪ್‌ ಆಗಿದ್ದಳು.. ಇದೀಗ ಪೊಲೀಸರು ಎಲ್ಲರನ್ನೂ ಕರೆತಂದಿದ್ದಾರೆ..

Share Post