ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ!; ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾದ!
ಬೆಂಗಳೂರು; ಮನೆಯಲ್ಲಿ ಅಣ್ಣನ ಮದುವೆಗೆ ತಯಾರಿ ನಡೆದಿತ್ತು.. ಚಿನ್ನಾಭರಣ ಖರೀದಿ ಮಾಡಿ ತರಲಾಗಿತ್ತು.. ಮದುವೆ ಖರ್ಚಿಗೆಂದು ಹಣ ಹೊಂದಿಸಲಾಗಿತ್ತು.. ಆದ್ರೆ, ತಮ್ಮ ಬೇರೆಯದೇ ಪ್ಲ್ಯಾನ್‌ನಲ್ಲಿದ್ದ.. ಆತ ಆನ್‌ಲೈನ್ ಗೇಮ್ ಆಡಿ ಎಲ್ಲವನ್ನೂ ಕಳೆದುಕೊಂಡಿದ್ದ.. ವಿಪರೀತ ಸಾಲ ಮಾಡಿಕೊಂಡಿದ್ದ.. ಅದನ್ನು ತೀರಿಸೋದಕ್ಕಾಗಿ ಆತ ಅಣ್ಣನ ಮದುವೆಗೆಂದು ತಂದಿದ್ದ ಚಿನ್ನಾಭರಣ ಹಾಗೂ ಕೂಟಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದ..
ಈ ಘಟನೆ ನಡೆದಿರೋದು ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.. ಸೆಪ್ಟೆಂಬರ್ 15ರಂದು ಮದುವೆ ಫಿಕ್ಸ್ ಆಗಿತ್ತು.. ಅಂದರೆ ಮದುವೆಗೆ ಇನ್ನು ಎರಡೇ ದಿನ ಬಾಕಿ ಇದೆ.. ಹೀಗಿರುವಾಗಲೇ ಕಿರಿಯ ಸಹೋದರ ಆದಿತ್ಯ, ಮನೆಯಲ್ಲಿನ ಚಿನ್ನಾಭರಣ ಹಾಗೂ ಹಣ ಕದ್ದು ಪರಾರಿಯಾಗಿದ್ದ.. ಇದನ್ನು ಗಮನಿಸಿದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.. ಇದೀಗ ಪೊಲೀಸರು ಆತನನ್ನು ಹಿಡಿದು ತಂದಿದ್ದಾರೆ..
ಊಬರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಆದಿತ್ಯ ಆನ್‌ಲೈನ್ ಗೇಮ್‌ಗೆ ಅಡಿಕ್ಟ್ ಆಗಿ ವಿಪರೀತ ಹಣ ಕಳೆದುಕೊಂಡಿದ್ದ.. ಇತ್ತ ಮನೆಯಲ್ಲಿ ಅಣ್ಣನಿಗೆ ಮದುವೆ ಫಿಕ್ಸ್ ಆಗಿತ್ತು.. ಮನೆಯವರೆಲ್ಲಾ ಮದುವೆ ಕಾರ್ಡ್ ಹಂಚಲು ಕೋಲಾರಕ್ಕೆ ಹೋಗಿದ್ದರು.. ಇದೇ ಸಮಯ ನೋಡಿಕೊಂಡ ಆತ ಚಿನ್ನಾಭರಣ ಹಾಗೂ ಹಣದೊಂದಿಗೆ ಮನೆ ಬಿಟ್ಟು ಆಂಧ್ರಪ್ರದೇಶಕ್ಕೆ ಹೋಗುವ ಟ್ರೈನ್ ಹತ್ತಿದ್ದ.. ಈ ನಡುವೆ ಮನೆಗೆ ಬಂದ ಅಣ್ಣನಿಗೆ ಮನೆಯಲ್ಲಿ ಕಾಣೆಯಾಗಿರುವ ಚಿನ್ನಾಭರಣ ಬಗ್ಗೆ ತಿಳಿದು ಗಾಬರಿಯಾಗಿದೆ.. ಪೋಷಕರು ಕೂಡಾ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟಿದ್ದಾರೆ..
ಸಹೋದರ ಆದಿತ್ಯನ ಮೊಬೈಲ್ ಟವರ್ ಲೊಕೇಷನ್ ಟ್ರೇಸ್ ಮಾಡಿದಾಗ ಆತ ಟ್ರೈನ್‌ನಲ್ಲಿರುವುದು ಗೊತ್ತಾಗಿದೆ.. ಕೂಡಲೇ ಬೆನ್ನುಹತ್ತಿದ ಪೊಲೀಸರು ಆತನನ್ನು ಹಿಡಿದಿದ್ದಾರೆ.. ಪ್ರಕರಣದ ನಡೆದ ಐದೇ ಗಂಟೆಯಲ್ಲಿ ಆದಿತ್ಯನನ್ನು ಬಂಧಿಸಲಾಗಿದೆ.. ಆರೋಪಿ ಬಳಿ ಇದ್ದ 7 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ..