LifestyleNational

ಪತಿಯಿಂದ ಪತ್ನಿಗೆ ಈ ಐದು ಸುಖಗಳು ಸಿಗಲೇಬೇಕಂತೆ!

ಬೆಂಗಳೂರು; ಗಂಡ-ಹೆಂಡತಿ ಸಂಬಂಧ ಉಸಿರಿರೋ ತನಕ ಎಂದು ಹೇಳುತ್ತಾರೆ.. ಇಬ್ಬರೂ ಹೊಂದಿಕೊಂಡು ಬಾಳುವುದರ ಮೂಲಕ ಸಂಸಾರ ಬಂಧವನ್ನು ಗಟ್ಟಿಯಾಗಿಸುತ್ತಾರೆ.. ಹೀಗೆ ಸಂಸಾರ ಗಟ್ಟಿಯಾಗಿರಬೇಕು ಹಾಗೂ ಸುಖಮಯವಾಗಿರಬೇಕು ಅಂದ್ರೆ ಪತಿಯಿಂದ ಪತ್ನಿಗೆ ಐದು ಸುಖಗಳು ಸಿಗಲೇಬೇಕಂತೆ.. ಹೀಗಂತ ಚಾಣಕ್ಯ ಹೇಳಿದ್ದಾರೆ… ಹಾಗಾದ್ರೆ ಆ ಐದು ಸುಖಗಳ ಯಾವುವು ಅನ್ನೋದನ್ನು ನೋಡೋಣ..

೧. ಹಣಕಾಸಿನ ಸುಖ;
ಮಹಿಳೆಯರು ಹೆಚ್ಚು ಶಾಪಿಂಗ್‌ ಮಾಡುತ್ತಾರೆ.. ಆಸೆಗಳು ಹೆಚ್ಚು.. ಹೀಗಾಗಿ ಅವರು ಹಣವನ್ನು ಬಯಸುತ್ತಾರೆ.. ಪತಿಯಾದವನು ಪತ್ನಿಗೆ ಆಗಾಗ ಖರ್ಚಿಗೆಂದು ಹಣ ಕೊಡಬೇಕು.. ಕೇಳಿದರೂ, ಕೇಳದಿದ್ದರೂ ಹಣ ಕೊಡುತ್ತಿರಬೇಕು.. ಹೀಗೆ ಮಾಡುವುದರಿಂದ ಪತ್ನಿ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾಳೆ.. ಗಂಡ ಹೀಗೆ ಮಾಡುವುದರಿಂದ ಪತ್ನಿಗೆ ಗಂಡನ ಬಗ್ಗೆ ಗೌರವ ಹೆಚ್ಚಾಗುತ್ತದೆ.. ಮಹಿಳೆಯರು ಆರ್ಥಿಕ ವಿಷಯದಲ್ಲಿ ಸ್ವಾವಲಂಬಿಗಳಾದಷ್ಟು ಮನೆಯಲ್ಲಿ ಸುಖದ ವಾತಾವರಣ ನಿರ್ಮಾಣವಾಗುತ್ತದೆ..
೨.ಗೌರವದ ಸುಖ;
ಪತ್ನಿಯಾದವಳಿಗೂ ಆತ್ಮಗೌರವ ಇರುತ್ತದೆ.. ಪತ್ನಿ ಎಂಬ ಕಾರಣಕ್ಕೆ ಗಂಡ ದಬ್ಬಾಳಿಕೆ ಮಾಡಬಾರದು.. ಪತ್ನಿಗೆ ಪತಿಯಾದವನು ಗೌರವ ಕೊಡಬೇಕು.. ಆಕೆಯ ಗೌರವಕ್ಕೆ ಚ್ಯುತಿ ತರಬಾರದು.. ನನ್ನ ಗಂಡ ನನಗೆ ಗೌರವ ಕೊಡುತ್ತಿಲ್ಲ.. ನನಗೆ ಗಂಡನಿಂದ ಗೌರವ ಸಿಗಬೇಕು ಎಂಬ ಆಲೋಚನೆಯೇ ಹೆಂಡತಿಗೆ ಬರಬಾರದು.. ಇನ್ನೂ ಹೇಳಬೇಕು ಅಂದ್ರೆ ಯಾವ ಕಾರಣಕ್ಕೂ ಗಂಡನಾದವನು ಹೆಂಡತಿಯನ್ನು ಅವಮಾನಿಸಬಾರದು.. ಅದ್ರಲ್ಲೂ ಮತ್ತೊಬ್ಬರ ಮುಂದೆ ಯಾವ ಕಾರಣಕ್ಕೂ ಅವಮಾನಿಸಬಾರದು.. ಇಬ್ಬರೂ ಇಬ್ಬರನ್ನೂ ಗೌರವದಿಂದ ಕಂಡರೆ ಸಂಸಾರ ಸುಖವಾಗಿರುತ್ತದೆ..
೩. ರಕ್ಷಣೆಯ ಸುಖ;
ಪ್ರತಿ ಪತ್ನಿಯೂ ಕೂಡಾ ತನ್ನ ಗಂಡ ತನಗೆ ಬೆನ್ನುಲುಬಾಗಿರಬೇಕು.. ಅಗತ್ಯ ಬಂದಾಗ ತನ್ನ ರಕ್ಷಣೆಗೆ ನಿಲ್ಲಬೇಕು ಎಂದು ಬಯಸುತ್ತಾಳೆ.. ಹೀಗಾಗಿ ಎಂತಹದ್ದೇ ಸಂದರ್ಭದಲ್ಲಿ ಪತ್ನಿಯ ರಕ್ಷಣೆಗೆ ನಿಲ್ಲುವ ಕೆಲಸ ಮಾಡಬೇಕಾದುದು ಗಂಡನ ಕರ್ತವ್ಯವಾಗಿರುತ್ತದೆ.. ಪತ್ನಿಗೆ ತಾನು ಇದ್ದ ಕಡೆ ಸುರಕ್ಷಿತವಾಗಿದ್ದೇನೆ ಎಂದೆನಿಸಿದಾಗ ಅಲ್ಲಿ ಸುಖ ತನ್ತಾನೇ ಬರುತ್ತದೆ..
೪. ಪ್ರೀತಿಯ ಸುಖ
ಗಂಡ ಅಂದ ಮೇಲೆ ಹೆಂಡತಿಯನ್ನು ಪ್ರೀತಿಸುತ್ತಾನೆ.. ಆದರೂ ಕೆಲವೊಮ್ಮೆ ಮನಸ್ತಾಪಗಳಾಗುವುದುಂಟು.. ಆದ್ರೆ ಅಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು.. ಹೊರಗಿನ ಯಾವುದೇ ವಿಚಾರವನ್ನು ತಂದು ಪತ್ನಿಯ ಮೇಲೆ ಹಾಕಬಾರದು.. ಹೊರಗೆ ಕೆಲಸದ ಸ್ಥಳದಲ್ಲಿನ ಒತ್ತಡವನ್ನು ಮನೆಯವರೆಗೂ ತರುವುದನ್ನು ಗಂಡ ಆದವನು ಬಿಡಬೇಕು..
೫. ದೈಹಿಕ ಸುಖ;
ಇನ್ನು ಹೆಂಡತಿಯಾದವಳು ಗಂಡನಿಂದ ದೈಹಿಕ ಸುಖ ನಿರೀಕ್ಷಿಸುವುದು ಸಾಮಾನ್ಯ.. ಹೀಗಾಗಿ ಈ ವಿಚಾರದಲ್ಲೂ ಗಂಡ ಕಾಳಜಿ ವಹಿಸಬೇಕಾಗುತ್ತದೆ.. ದಾಂಪತ್ಯ ಸುಖಮಯವಾಗಿರಬೇಕು ಅಂದ್ರೆ ಪತ್ನಿಗೆ ಬೇಕಾದ ದೈಹಿಕ ಸುಖವನ್ನು ಕೂಡಾ ನೀಡಬೇಕಾಗುತ್ತದೆ.. ಈ ಬಗ್ಗೆ ನಾಚಿಕೆಯಿಲ್ಲದೆ ಇಬ್ಬರ ನಡುವೆ ಮುಕ್ತ ಚರ್ಚೆಯಾಗಬೇಕು..

Share Post