ರೈಲು ಹಳಿ ಮೇಲಿಟ್ಟಿದ್ದರು ಸಿಲಿಂಡರ್!; ಗುದ್ದಿದ ರೈಲು, ಮುಂದೇನಾಯ್ತು..?
ಲಕ್ನೋ; ದುಷ್ಕರ್ಮಿಗಳು ರೈಲಿನ ಹಳಿ ಮೇಲೆ ಎಲ್ಪಿಜಿ ಸಿಲಿಂಡರ್ ಇಟ್ಟು ದುಷ್ಕೃತ್ಯಕ್ಕೆ ಸಂಚು ನಡೆಸಿದ್ದರು.. ದುಷ್ಕರ್ಮಿಗಳು ಅಂದುಕೊಂಡಂತೆ ವೇಗವಾಗಿ ಬಂದ ರೈಲು ಸಿಲಿಂಡರ್ಗೆ ಗುದ್ದಿದೆ.. ಆದ್ರೆ ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ.. ಕಾಳಿಂದಿ ಎಕ್ಸ್ಪ್ರೆಸ್ ರೈಲು ಕಾನ್ಪುರದಿಂದ ಭಿವಾನಿಗೆ ಹೊರಟಿತ್ತು.. ಈ ವೇಳೆ ಈ ದುರ್ಘಟನೆ ನಡೆದಿದೆ.. ಆದ್ರೆ ರೈಲು ಹೊಡೆದಿದ್ದರಿಂದ ಸಿಲಿಂಡರ್ ದೂರಕ್ಕೆ ಚಿಮ್ಮಿದ್ದು, ಅಲ್ಲಿ ಸ್ಫೋಟಗೊಂಡಿದೆ.. ಹೀಗಾಗಿ ರೈಲುಗೆ ಯಾವುದೇ ಹಾನಿಯಾಗಿಲ್ಲ..
ರ್ರಾಜ್ಪುರ ಹಾಗೂ ಬಿಲ್ಹೌರ್ ನಿಲ್ದಾಣಗಳ ನಡುವೆ ಇರುವ ಮುಂಡೇರಿ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ.. ರೈಲು 80 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು.. ರೈಲಿನ ಲೋಕೋ ಪೈಲಟ್ ರಾಜ್ ಕಿಶೋರ್ ಸಿಲಿಂಡರ್ ನೋಡುತ್ತಲೇ ತುರ್ತು ಬ್ರೇಕ್ ಬಳಸಿದ್ದಾರೆ.. ಆದರೂ ಕೂಡಾ ಅದು ಸಿಲಿಂಡರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸಿಲಿಂಡರ್ ದೂರಕ್ಕೆ ಚಿಮ್ಮಿದ್ದು, ಅಲ್ಲಿಯೇ ಸ್ಫೋಟಗೊಂಡಿದೆ..
ಪೊಲೀಸರು ಪರಿಶೀಲನೆ ನಡೆಸಿದಾಗ ಹಳಿ 50 ಮೀಟರ್ ದೂರದಲ್ಲಿ ಎಲ್ಪಿಜಿ ಸಿಲಿಂಡರ್, ಬೆಂಕಿ ಪೊಟ್ಟಣ, ಪೆಟ್ರೋಲ್ ಬಾಟೆಲ್ ಹಾಗೂ ಕೆಲ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ.. ದುಷ್ಕರ್ಮಿಗಳು ಬೇಕೆಂದೇ ಈ ಅಲ್ಲಿ ಸಿಲಿಂಡರ್ ಇಟ್ಟಿದ್ದರು ಅನ್ನೋದು ಗೊತ್ತಾಗಿದೆ..