ಗಣೇಶ ಮೂರ್ತಿ ಜೊತೆ 60 ಗ್ರಾಂ ಚಿನ್ನ ನೆಕ್ಲೆಸ್ ವಿಸರ್ಜನೆ; ಮುಂದೇನಾಯ್ತು..?
ಬೆಂಗಳೂರು; ಗಣೇಶ ಮೂರ್ತಿಗೆ ತೊಡಿಸಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೆಸ್ ಜೊತೆಗೆ ವಿಸರ್ಜನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ವಿಸರ್ಜನೆ ಎಲ್ಲಾ ಮುಗಿದಾದ ಮೇಲೆ ಮನೆಯವರಿಗೆ ನೆಕ್ಲೇಸ್ ಜೊತೆಗೇ ಗಣೇಶನನ್ನು ವಿಸರ್ಜನೆ ಮಾಡಿರುವುದು ಅರಿವಾಗಿದೆ.. ಇದರಿಂದ ಗಣೇಶ ವಿಸರ್ಜನೆ ಸಂಭ್ರಮದಲ್ಲಿದ್ದವರಿಗೆ ಇದ್ದಕ್ಕಿದ್ದಂತೆ ಆತಂಕ ಶುರುವಾಗಿದೆ.. ಆದ್ರೆ ಅವರ ಅದೃಷ್ಟ ನೆಟ್ಟಗಿತ್ತು ಅನಿಸುತ್ತೆ.. ಚಿನ್ನದ ಸಿಕ್ಕಿದೆ.. ವಾಪಸ್ ಮನೆ ಸೇರಿದೆ..
ಇದು ಬೆಂಗಳೂರಿನ ಮಾಗಡಿ ರಸ್ತೆಯ ದಾಸರಹಳ್ಳಿ ಬಿಆರ್ಐ ಕಾಲೋನಿಯಲ್ಲಿ ನಡೆದಿದೆ.. ಇಲ್ಲಿ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶಗಳನ್ನು ವಿಸರ್ಜನೆ ಮಾಡೋದಕ್ಕಾಗಿ ಬಿಬಿಎಂಪಿ ವತಿಯಿಂದ ಟ್ರಕ್ ವ್ಯವಸ್ಥೆ ಮಾಡಲಾಗಿತ್ತು.. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಗಣೇಶನನ್ನು ಬಿಬಿಎಂಪಿ ಟ್ರಕ್ನಲ್ಲಿ ವಿಸರ್ಜನೆ ಮಾಡಲಾಗಿತ್ತು.. ಆದ್ರೆ ರಾತ್ರಿ 10 ಗಂಟೆ ಸುಮಾರಿಗೆ ಚಿನ್ನದ ನೆಕ್ಲೆಸ್ ನೆನಪಿಗೆ ಬಂದಿದೆ.. ಕೂಡಲೇ ಮನೆಯವರು ಶಾಸಕ ಪ್ರಿಯಾಕೃಷ್ಣಗೆ ಮಾಹಿತಿ ನೀಡಿ, ನಡೆದಿರುವ ವಿಚಾರ ತಿಳಿಸಿದ್ದರು..
ಆಗ ಶಾಸಕ ಪ್ರಿಯಾಕೃಷ್ಣ ಬೆಂಬಲಿಗರು ಟ್ರಕ್ನಲ್ಲಿದ್ದ ನೀರು ಖಾಲಿ ಮಾಡಿ ಚಿನ್ನದ ಸರ ಹುಡುಕಲು ಶುರು ಮಾಡಿದ್ದರು.. ರಾತ್ರಿಯೆಲ್ಲಾ ಹುಡುಕಾಟ ನಡೆಸಿದಾಗ, ಬೆಳಗಿಜಾವ ಸರ ಸಿಕ್ಕಿದೆ..