CrimeNational

ಬರ್ತ್‌ಡೇ ಪಾರ್ಟಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

ಥಾಣೆ; ಬರ್ತ್‌ ಡೇ ಪಾರ್ಟಿ ಒಂದರಲ್ಲಿ ಮಹಿಳೆಗೆ ಡ್ರಗ್ಸ್‌ ನೀಡಿ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ ಬಳಿ ಶಿರ್ಗಾಂವ್‌ ಪ್ರದೇಶದ ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆದಿದೆ.. 22 ಮಹಿಳೆಗೆ ಡ್ರಗ್ಸ್‌ ನೀಡಲಾಗಿದ್ದು, ಆಕೆ ಮತ್ತಿನಲ್ಲಿದ್ದಾಗ ಅತ್ಯಾಚಾರ ಮಾಡಲಾಗಿದೆ.. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ..
ಶಿವಂ ಸಂಜಯ್‌ ರಾಜೇ, ಅಲಿಸ್ಕಾ ಭೂಮಿಕಾ ಹಾಗೂ ಸಂತೋಷ್‌ ಶಿವರಾಮ್‌ ಎಂಬುವವರನ್ನು ಬಂಧಿಸಲಾಗಿದೆ.. ಅತ್ಯಾಚಾರಕ್ಕೊಳಗಾದ ಮಹಿಳೆ ಅಲಿಸ್ಕಾ ಹುಟ್ಟುಹಬ್ಬವಿದ್ದು, ಪಾರ್ಟಿಗೆ ತಮ್ಮ ಮನೆಗೆ ಆಹ್ವಾನಿಸಿದ್ದಳು.. ಈ ಸಂದರ್ಭದಲ್ಲಿ ಇತರ ಇಬ್ಬರು ಪುರುಷ ಆರೋಪಿಗಳೂ ಅಲ್ಲಿದ್ದರು.. ಇನ್ನು ಮಹಿಳೆ ಪಾರ್ಟಿ ಮುಗಿಸಿ ಮನೆಗೆ ಹೋಗವುದಾಗಿ ಹೇಳಿದ್ದಾಳೆ ಈ ವೇಳೆ ಆರೋಪಿ ಅಲಿಸ್ಕಾ ಭೂಮಿಕಾ ಜ್ಯೂಸ್‌ ಕೊಡುವುದಾಗಿ ಹೇಳಿ, ಅದರಲ್ಲಿ ಡ್ರಗ್ಸ್‌ ಬೆರೆಸಿಕೊಂಡು ಬಂದು ಕೊಟ್ಟಿದ್ದಾಳೆ..
ಅದನ್ನು ಕುಡಿದ ಮಹಿಳೆಗೆ ತಲೆ ತಿರುಗುಲು ಶುರುವಾಗಿದೆ.. ಇದೇ ವೇಳೆ ಮದ್ಯ ಸೇವಿಸಿದ್ದ ಇಬ್ಬರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.. ಬೆಳಗ್ಗೆ ಮಹಿಳೆಗೆ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ.. ಕೂಡಲೇ ಆಕೆ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ..

Share Post