ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ!; ಬೆಂಕಿ ಹಚ್ಚಿಕೊಂಡ ಮಹಿಳೆ ಆತ್ನಹತ್ಯೆ!
ಬೆಂಗಳೂರು; ಗಂಡ ನಿತ್ಯ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಬೆಂಗಳೂರಿನ ಹೊರಮಾವು ಬಳಿಯ ಅಕ್ಷಯ ನಗರದಲ್ಲಿ ಈ ದಾರುಣ ಘಟನೆ ನಡೆದಿದೆ.
ಅನುಷಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.. ಈಕೆ ಶ್ರೀಹರಿ ಎಂಬಾತನನ್ನು ಐದು ವರ್ಷದ ಹಿಂದೆ ಮದುವೆಯಾಗಿದ್ದಳು.. ಇವರಿಗೆ ಒಂದು ಮಗು ಕೂಡಾ ಇದೆ.. ಆದ್ರೆ, ಪತಿ ಶ್ರೀಹರಿ ದಿನವೂ ತನ್ನ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ಹೆಂಡತಿಗೆ ತೋರಿಸುತ್ತಿದ್ದ ಎನ್ನಲಾಗಿದೆ.. ಜೊತೆಗೆ ಅಶ್ಲೀಲ ಚಿತ್ರದಲ್ಲಿರುವಂತೆ ಸೆಕ್ಸ್ನಲ್ಲಿ ಪಾಲ್ಗೊಳ್ಳುವಂತೆ ಅನುಷಾಗೆ ಒತ್ತಾಯಿಸುತ್ತಿದ್ದನಂತೆ.. ಇದರಿಂದ ಬೇಸತ್ತ ಅನುಷಾ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಇನ್ನು ಹೀಗೆ ಟಾರ್ಚರ್ ಕೊಡುವುದಲ್ಲದೆ ಮತ್ತೊಂದು ಹುಡುಗಿಯ ಜೊತೆ ಶ್ರೀಹರಿ ಸಲುಗೆ ಬೆಳೆಸಿದ್ದನಂತೆ.. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಇನ್ನೂ ಕಿರಕುಳ ಹೆಚ್ಚು ಮಾಡಿದ್ದನಂತೆ.. ಜೊತೆಗೆ ಡಿವೋರ್ಸ್ ಕೊಡುವಂತೆಯೂ ಪೀಡಿಸುತ್ತಿದ್ದ ಎನ್ನಲಾಗಿದೆ.. ಇದರಿಂದ ಬೇಸತತು ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮನೆಯ ವಾಶ್ ರೂಮ್ನಿಂದ ಗಂಡನಿಗೆ ವಿಡಿಯೋ ಕಾಲ್ ಮಾಡಿರುವ ಅನುಷಾ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.. ಆದ್ರೆ ಆತ ಅದನ್ನು ನಿರ್ಲಕ್ಷ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ..