CrimeNational

ದಂಪತಿಯನ್ನು ಅರೆಬೆತ್ತಲೆ ಮಾಡಿ ಊರಲ್ಲಿ ಮೆರವಣಿಗೆ!

ಪಾಟ್ನಾ; ಗಂಡ-ಹೆಂಡತಿಯನ್ನು ಅರೆಬೆತ್ತಲೆ ಮಾಡಿ ಊರ ತುಂಬಾ ಮೆರವಣಿಗೆ ಮಾಡಿಸಿರುವ ದಾರುಣ ಘಟನೆ ಬಿಹಾರದಲ್ಲಿ ನಡೆದಿದೆ.. ಬಿಹಾರದ ಜುಲೈ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ದಂಪತಿಯನ್ನು ಅರೆನಗ್ನ ಮಾಡಿ ಊರ ತುಂಬಾ ಮೆರವಣಿಗೆ ಮಾಡಿ ಅವಮಾನ ಮಾಡಲಾಗಿದೆ..
ಝಾಝಾ ಕ್ಷೇತ್ರದ ತಾರಾಕುರಾ ಎಂಬ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ.. ಮೂರು ಮಕ್ಕಳ ತಾಯಿಯಾಗಿರುವ ಮಹಿಳೆ ಅದೇ ಗ್ರಾಮದ ಯುವಕನ ಜೊತೆ ಓಡಿಹೋಗಿದ್ದಳು.. ಕೆಲ ದಿನಗಳ ನಂತೆ ವಾಪಸ್‌ ಬಂದಿದ್ದು, ಗ್ರಾಮದಲ್ಲಿ ಪಂಚಾಯಿತಿ ನಡೆದಿದೆ.. ಪಂಚಾಯ್ತಿಯವರು ಗಂಡ-ಹೆಂಡತಿಯನ್ನು ಅರೆನಗ್ನ ಮಾಡಿ ಮೆರವಣಿಗೆ ನಡೆಸುವ ಶಿಕ್ಷೆ ವಿಧಿಸಿದ್ದಾರೆ.. ಹೀಗಾಗಿ, ಇಬ್ಬರನ್ನೂ ಅರೆನಗ್ನ ಮಾಡಿ ಇಬ್ಬರ ಮುಖಕ್ಕೆ ಕಪ್ಪು ಮಸಿ ಬಳಿದು, ಚಪ್ಪಲಿ ಹಾಕಿ ಊರಿನಲ್ಲಿ ಮೆರವಣಿಗೆ ಮಾಡಲಾಗಿದೆ..
ಈ ದೃಶ್ಯಗಳನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಮಹದಾನಂದಪಟ್ಟಿದ್ದಾರೆ.. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.. ಸುಮಾರು 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ..

Share Post