CrimeDistricts

ಸಹಪಾಠಿಯನ್ನು ಮತಾಂತರಕ್ಕೆ ಒತ್ತಾಯಿಸಿದ ವೈದ್ಯ ವಿದ್ಯಾರ್ಥಿ ಅರೆಸ್ಟ್‌!

ಉಡುಪಿ(Udupi); ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಸಹಪಾಠಿಗೆ ಒತ್ತಾಯ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.. ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಮಹಮದ್‌ ಡ್ಯಾನಿಷ್‌ ಖಾನ್‌ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.. ಈತ ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಲ್ಲದೆ, ಸಹಪಾಠಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ..

ಇದನ್ನೂ ಓದಿ; ಸರ್ಕಾರ ಬದಲಾದರೂ ಗೃಹಲಕ್ಷ್ಮೀ ಹಣ ಬರುತ್ತೆ!; ಹೇಗೆ ಗೊತ್ತಾ..?

ತನ್ನ ಜೊತೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿದ್ದ ಮಹಮದ್‌ ಡ್ಯಾನಿಷ್‌ ಖಾನ್‌ ಅವರು, ಆಕೆಯೊಂದಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.. ಇಬ್ಬರೂ ಕೂಡಾ ಗಾಢವಾಗಿ ಪ್ರೀತಿಯಲ್ಲಿದ್ದರು ಎನ್ನಲಾಗಿದೆ.. ಆದ್ರೆ ಇತ್ತೀಚೆಗೆ ಆರೋಪಿ ಪ್ರೇಯಸಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯ ಮಾಡುತ್ತಿದ್ದ ಎಂಬ ಆರೋಪವಿದೆ.. ಮಾರ್ಚ್‌ 11ರಂದು ಪ್ರೇಯಸಿಯ ಕೊಠಡಿಗೆ ಹೋಗಿದ್ದ ಆರೋಪಿ, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎಂದೂ ಆರೋಪಿಸಲಾಗಿದೆ..
ಮಹಮದ್‌ ಡ್ಯಾನಿಷ್‌ ಖಾನ್‌ನ ನಿರಂತರ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿನಿ ಆಗಸ್ಟ್‌ 31ರಂದು ಉಡುಪಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ..

ಇದನ್ನೂ ಓದಿ; ಮಾಜಿ ಶಾಸಕನ ಬೆತ್ತಲೆ ಮೆರವಣಿಗೆ ಮಾಡ್ತಾರಂತೆ ಕಾಂಗ್ರೆಸ್‌ ಶಾಸಕ!

Share Post