ಅಚ್ಚರಿ ಹಾಗೂ ಅನುಮಾನದ ಬೆಳವಣಿಗೆ; ಮುಡಾ ಮಾಜಿ ಆಯುಕ್ತರಿಗೆ ದೊಡ್ಡ ಉಡುಗೊರೆ!
ಮೈಸೂರು; ಮುಡಾ ಸೈಟು ಹಂಚಿಕೆ ವಿಚಾರ ಈಗ ದೊಡ್ಡ ಮಾಡುತ್ತಿದೆ.. ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ.. ಶನಿವಾರ ನೀಡುವ ಹೈಕೋರ್ಟ್ ಆದೇಶದ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ.. ಹೀಗಿರುವಾಗಲೇ ಮುಡಾ ಮಾಜಿ ಆಯುಕ್ತನಿಗೆ ರಾಜ್ಯ ಸರ್ಕಾರ ಒಳ್ಳೆಯ ಹುದ್ದೆ ಪ್ರಸಾದಿಸಿರುವುದು ಅಚ್ಚರಿ ಹಾಗೂ ಅನುಮಾನಕ್ಕೆ ಕಾರಣವಾಗಿದೆ..
ಇದನ್ನೂ ಓದಿ; ಅಂಗಡಿ ಮುಂದೆ ನಿಂತಿದ್ದ ಕಾರ್ಮಿಕನ ಕತ್ತು ಕುಯ್ದ ಅಪರಿಚಿತ!
ಮುಡಾ ಆಯುಕ್ತನಾಗಿ ಕೆಲಸ ಮಾಡಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.. ಮುಡಾ 50:50 ಸೈಟು ಹಂಚಿಕೆ ಭ್ರಷ್ಟಾಚಾರದಲ್ಲಿ ಕೆಎಎಸ್ ಅಧಿಕಾರಿಯಾಗಿರುವ ಜಿ.ಟಿ.ದಿನೇಶ್‌ಕುಮಾರ್ ಪಾತ್ರ ಇದೆ ಎಂಬ ಗಂಭೀರ ಆರೋಪ ಕೂಡಾ ಇದೆ.. ಹೀಗಿರುವಾಗಲೇ ಅವರಿಗೆ ಕುಲಸಚಿವ ಹುದ್ದೆ ನೀಡಿರುವುದಕ್ಕೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ..
ಇದನ್ನೂ ಓದಿ; ಲಿಫ್ಟ್‌ನಲ್ಲೇ ಯುವಕ-ಯುವತಿ ಕಿಸ್ಸಿಂಗ್!; ವಿಡಿಯೋ ಲೀಕ್ ಆಗಿದ್ದು ಹೇಗೆ..?
ಮುಡಾ ಸೈಟು ಹಂಚಿಕೆ ಅಕ್ರಮದ ಆರೋಪ ಕೇಳಿಬಂದ ಕೂಡಲೇ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಅವರನ್ನು ಯಾವುದೇ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿತ್ತು.. ಇದೀಗ ಅವರಿಗೆ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಸ್ಥಾನ ನೀಡಲಾಗಿದೆ.. ಆರೋಪ ಹೊತ್ತಿರುವ ಅಧಿಕಾರಿಗೆ ಇಂತಹ ಹುದ್ದೆ ಯಾಕೆ ನೀಡಿದರು ಎಂಬುದರ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..