CrimeNational

ಟೆಸ್ಟ್‌ ಡ್ರೈವ್‌ಗೆ ಬೆಂಜ್‌ ಕಾರು ತೆಗೆದುಕೊಂಡು ಹೋದವಳು ಮಾಡಿದ್ದೇನು..?

ಕೊಚ್ಚಿ(Kerala); ಕಾರು ಕೊಳ್ಳೋ ಮುನ್ನ ಟೆಸ್ಟ್‌ ಮಾಡೋದು ಸಾಮಾನ್ಯ.. ಟೆಸ್ಟ್‌ ಮಾಡೋರಿಗೆ ಕಾರು ಓಡಿಸೋದು ಚೆನ್ನಾಗಿ ಗೊತ್ತಿದ್ದರೆ ಓಕೆ.. ಗೊತ್ತಿಲ್ಲದೆ ಇದ್ದು ಟೆಸ್ಟ್‌ ಮಾಡೋಕೆ ಹೋದ್ರೆ ಏನಾಗುತ್ತೆ ಅನ್ನೋದು ನೀವೇ ಊಹೆ ಮಾಡಬಹುದು.. ಇಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.. ಸದ್ಯ ಇದರಿಂದಾಗಿ ಜೀವ ಹೋಗಿಲ್ಲ ಅನ್ನೋದಷ್ಟೇ ಸಮಾಧಾನ..

ಇದನ್ನೂ ಓದಿ; ನಾಳೆಯೇ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಪ್ರಕರಣದ ವಿಚಾರಣೆ

ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ.. ಎರಡು ಬೆಂಜ್‌ ಕಾರುಗಳನ್ನು ಇಬ್ಬರು ಮಹಿಳೆಯರು ಟೆಸ್ಟ್‌ ಡ್ರೈವ್‌ಗೆ ತೆಗೆದುಕೊಂಡು ಹೋಗಿದ್ದು, ಅದರಲ್ಲಿ ಒಂದು ಕಾರು ಭೀಕರ ಅಪಘಾತಕ್ಕೀಡಾಗಿದೆ.. ಯಾವ ಮಟ್ಟಿಗೆಗೆ ಎಂದರೆ ಅದು ಸಂಪೂರ್ಣ ನಜ್ಜುಗುಜ್ಜಾಗಿದೆ.. ಆಗಸ್ಟ್‌ 24ರಂದು ಮಹಿಳೆಯರಿಬ್ಬರು ಬಂದು ಕೊಚ್ಚಿಯ ವಿಲ್ಲಿಂಗ್ಡನ್ ಐಲ್ಯಾಂಡ್​ನಲ್ಲಿ ಎರಡು ಮರ್ಸಿಡಿಜ್ ಬೆಂಜ್ ಎಎಂಜಿ ಮಾಡಲ್ ಕಾರ್​ಗಳನ್ನು ಟೆಸ್ಟ್‌ ಡ್ರೈವ್‌ಗೆ ಪಡೆದಿದ್ದರು..

ಇದನ್ನೂ ಓದಿ; ಐಸಿಸಿ ಅಧ್ಯಕ್ಷರಾಗಿ ಜಯ್‌ ಶಾ ಅವಿರೋಧ ಆಯ್ಕೆ!

ಇದರಲ್ಲಿ ಒಬ್ಬ ಮಹಿಳೆ ಓಡಿಸುತ್ತಿದ್ದ ಕಾರು ಐಲ್ಯಾಂಡ್‌ನ ಕೇಂದ್ರೀಯ ವಿದ್ಯಾಲಯದ ಬಳಿ ನಿಯಂತ್ರಣ ತಪ್ಪಿ ಅಲ್ಲಿದ ರೈಲ್ವೇ ಟ್ರ್ಯಾಕ್‌ಗೆ ನುಗ್ಗಿದೆ.. ಇದಕ್ಕೂ ಮೊದಲು ಬೇರೆ ಒಂದು ಬೆಂಜ್‌ ಕಾರಿಗೂ ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಟೆಸ್ಟ್‌ ಕಾರೊಂದು ಸಂಪೂರ್ಣ ನಜ್ಜುಗುಜ್ಜಾಗಿದೆ.. ಇದರ ಜೊತೆಗೆ ಮರ್ಸಿಡಿಜ್ ಬೆಂಜ್ ಎಸ್​ಎಲ್​ 55 ರೋಡ್​ಸ್ಟೇರ್ ಕಾರಿಗೆ ಕೂಡಾ ಸಾಕಷ್ಟು ಹಾನಿಯಾಗಿದೆ.. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

ಇದನ್ನೂ ಓದಿ; ಗರ್ಭ ಧರಿಸೋದಕ್ಕೆ ಭಾರತದ ಈ ಹಳ್ಳಿಗೆ ಬರ್ತಾರಂತೆ ಯೂರೋಪ್‌ ಮಹಿಳೆಯರು!

Share Post