NationalPolitics

ಮುಡಾ ವಿಚಾರದಲ್ಲಿ ರಾಹುಲ್‌ ಗಾಂಧಿ ಮೌನವಾಗಿರುವುದೇಕೆ..?

ಬೆಂಗಳೂರು; ಮುಡಾ ಹಗರಣದ ವಿಚಾರದಲ್ಲಿ ದೊಡ್ಡ ರಾಜಕೀಯ ತಿಕ್ಕಾಟ ನಡೆದಿದೆ.. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕರು ಆಗ್ರಹ ಮಾಡುತ್ತಿದ್ದಾರೆ.. ಇನ್ನೊಂದೆಡೆ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.. ಆಗಸ್ಟ್‌ 29ರಂದು ಹೈಕೋರ್ಟ್‌ ಏನು ಆದೇಶ ನೀಡುತ್ತೋ ಗೊತ್ತಿಲ್ಲ.. ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಕರಣದ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಂದು ಮಾತೂ ಮಾತನಾಡಿಲ್ಲ.. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ವೈದ್ಯನಿಗೆ ಹಿಗ್ಗಾಮುಗ್ಗಾ ಗೂಸಾ!

ಮುಡಾದಲ್ಲಿ ಅಕ್ರಮವಾಗಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ 14 ಸೈಟುಗಳನ್ನು ಬದಲಿ ನಿವೇಶನಗಳಾಗಿ ಪಡೆದಿದ್ದಾರೆ.. ಬೆಲೆಬಾಳುವ ಜಾಗದಲ್ಲಿ ಪ್ರಭಾವ ಬಳಸಿ ಈ ಸೈಟುಗಳನ್ನು ಪಡೆಯಲಾಗಿದೆ ಎಂಬ ಆರೋಪವಿದೆ.. ಈ ಬಗ್ಗೆ ಟಿ.ಜೆ.ಅಬ್ರಹಾಂ, ಕೃಷ್ಣ, ಪ್ರದೀಪ್‌ ಕುಮಾರ್‌ ಎಂಬುವವರು ಖಾಸಗಿ ದೂರು ದಾಖಲಿಸಿದ್ದಾರೆ.. ಇವರ ಮನವಿ ಮೇರೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.. ಇನ್ನು ಖೆಸ್‌ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ಇನ್ನೂ ನಿರ್ಧಾರ ಮಾಡಬೇಕಿದೆ.. ಆದ್ರೆ, ಈ ನಡುವೆ ಸಿದ್ದರಾಮಯ್ಯ ಅವರು, ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದಾರೆ.. ಆಗಸ್ಟ್‌ 29ಕ್ಕೆ ಹೈಕೋರ್ಟ್‌ ಆದೇಶ ನೀಡುವ ಸಾಧ್ಯತೆ ಇದೆ..

ಇದನ್ನೂ ಓದಿ; ದರ್ಶನ್‌ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಸಿಎಂ ಸೂಚನೆ; ತುಮಕೂರಿಗೆ ಹೋಗ್ತಾರಾ ಚಾಲೆಂಜಿಂಗ್‌ ಸ್ಟಾರ್‌..?

ಹೀಗಿರುವಾಗಲೇ ಸಿದ್ದರಾಮಯ್ಯ ಅವರು ಎರಡು ಬಾರಿ ದೆಹಲಿಗೆ ಹೋಗಿ ಹೈಕಮಾಂಡ್‌ ನಾಯಕರಿಗೆ ಪ್ರಕರಣದ ಬಗ್ಗೆ ಮನವರಿಕೆ ಮಾಡಿ ಬಂದಿದ್ದಾರೆ.. ದಾಖಲೆಗಳನ್ನು ನೀಡಿ ವಿವರಿಸಿಯೂ ಇದ್ದಾರೆ.. ಈ ಮೂಲಕ ತನ್ನದೇನೂ ತಪ್ಪಿಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.. ಹೀಗಿದ್ದರೂ ಕೂಡಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಬಗ್ಗೆ ಯಾವುದೇ ಮಾತನಾಡಿಲ್ಲ.. ರಾಜ್ಯಪಾಲರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.. ಬಿಜೆಪಿಯವರು ರಾಜ್ಯಪಾಲರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದಾರೆ.. ಆದ್ರೆ, ರಾಹುಲ್‌ ಗಾಂಧಿ ಮಾತ್ರ ಈ ಪ್ರಕರಣದ ಬಗ್ಗೆ ಏನೂ ಮಾತನಾಡಿಲ್ಲ.. ಬರೀ ನಿಮ್ಮ ಜೊತೆ ನಾವಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ಅಭಯ ನೀಡಿ ಕಳುಹಿಸಿದ್ದಾರೆ..

ಇದನ್ನೂ ಓದಿ; ಚನ್ನಪಟ್ಟಣಕ್ಕೆ ಯಾರು..?; ಟಿಕೆಟ್‌ ಯೋಗೇಶ್ವರ್‌ಗಾ..? ನಿಖಿಲ್‌ ಕುಮಾರಸ್ವಾಮಿಗಾ..?

ಇತ್ತ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಿದ್ದರು.. ಒಂದಷ್ಟು ಚರ್ಚೆಗಳನ್ನು ಮಾಡಿದ್ದರು.. ಆದ್ರೆ ಅವರೂ ಕೂಡಾ ಪ್ರಕರಣದ ಬಗ್ಗೆ ಹೆಚ್ಚೇನೂ ಮಾತನಾಡಿಲ್ಲ.. ಸುರ್ಜೇವಾಲಾ ಮಾತ್ರ ಮಾಧ್ಯಮಗಳ ಮುಂದೆ ಬಂದು ಪಕ್ಷ ಸಿದ್ದರಾಮಯ್ಯ ಪರ ನಿಲ್ಲುತ್ತದೆ ಎಂದು ಹೇಳಿದ್ದಾರೆ.. ಇದರ ಜೊತೆಗೆ ಹೈಕಮಾಂಡ್‌ ದೆಹಲಿಯಿಂದಲೇ ವಕೀಲರನ್ನು ಕಳುಹಿಸಿಕೊಟ್ಟಿದೆ..

ಇದನ್ನೂ ಓದಿ; ದೇಶಕ್ಕೆ ಹೊಸ ಪ್ರಧಾನಿ ಬರ್ತಾರಾ..?; ಹೊಸ ಚರ್ಚೆ ಹುಟ್ಟುಹಾಕ್ತಿರೋದು ಯಾಕೆ..?

ಇತರ ರಾಜ್ಯಗಳಲ್ಲೂ ರಾಜ್ಯಪಾಲರ ಅಧಿಕಾರ ದುರುಪಯೋಗಪಡಿಸಿಕೊಂಡು ಆರೋಪ ಇದ್ದುದರಿಂದ, ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಸಿದ್ದರಾಮಯ್ಯ ಇದ್ದರು.. ಆದ್ರೆ ಯಾಕೋ ಹೈಕಮಾಂಡ್‌ ಈ ಬಗ್ಗೆ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ.. ಬದಲಾಗಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲೋ ಅಭಯ ನೀಡಿದೆ.. ಇದನ್ನೆಲ್ಲಾ ನೋಡುತ್ತಿದ್ದರೆ, ಸಿದ್ದರಾಮಯ್ಯ ವಿರುದ್ಧ ಆದೇಶ ಬಂದರೆ ಸಿಎಂ ಸ್ಥಾನವನ್ನು ಬದಲಾಯಿಸುವ ಸಾಧ್ಯತೆಯೂ ಇಲ್ಲದಿಲ್ಲ..

ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ವೈದ್ಯನಿಗೆ ಹಿಗ್ಗಾಮುಗ್ಗಾ ಗೂಸಾ!

Share Post