NationalPolitics

ಹೊಸ ಸಿಎಂ ಹುಡುಕುತ್ತಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?; ಯಾರಿಗೆ ಅವಕಾಶ ಇದೆ..?

ನವದೆಹಲಿ(Newdelhi); ಮುಡಾ ಹಗರಣದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಕಾಂಗ್ರೆಸ್‌ ಹೈಕಮಾಂಡ್‌ ನಿಂತಿದೆ.. ಹಾಗಂತ ಹೈಕಮಾಂಡ್‌ ನಾಯಕರು ಹೇಳಿದ್ದಾರೆ.. ಹೈಕಮಾಂಡ್‌ ಅಂದ್ರೆ ಸುರ್ಜೇವಾಲಾ ಅವರು ಮೀಡಿಯಾ ಮುಂದೆ ಬಂದು ಪಕ್ಷ ಸಿದ್ದರಾಮಯ್ಯ ಪರ ನಿಲ್ಲುತ್ತೆ ಎಂದು ಹೇಳಿದ್ದಾರೆ.. ಆದ್ರೆ, ಹೈಕಮಾಂಡ್‌ ಎರಡನೇ ಆಪ್ಷನ್‌ ಕೂಡಾ ಹುಡುಕುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ.. ಯಾಕಂದ್ರೆ, ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾದರೆ ಯಾರನ್ನು ಸಿಎಂ ಮಾಡಬಹುದು…?, ಯಾರಿಗೆ ಪಟ್ಟ ಕಟ್ಟಿದರೆ ತೊಂದರೆಯಾಗೋದಿಲ್ಲ..? ಎಂಬುದರ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿದೆ..

ಇದನ್ನೂ ಓದಿ; ಒಂದು ಕೋಟಿ ಇನ್ಶೂರೆನ್ಸ್‌ಗಾಗಿ ಭಿಕ್ಷುಕನನ್ನು ಕೊಂದು ಗಂಡ ಎಂದಳು!

ನಿನ್ನೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಡಾ.ಜಿ.ಪರಮೇಶ್ವರ್‌ ಅವರು ದೆಹಲಿಗೆ ಹೋಗಿ ಹೈಕಮಾಂಡ್‌ ಮೀಟ್‌ ಮಾಡಿದ್ದರು.. ಈ ವೇಳೆ ಸಿದ್ದರಾಮಯ್ಯ ಅವರು ಮುಡಾ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಹೈಕಮಾಂಡ್‌ಗೆ ನೀಡಲಾಗಿದೆ.. ಅನಂತರ ಸಿದ್ದರಾಮಯ್ಯ ನಿನ್ನೆ ಸಂಜೆಯೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.. ಇತ್ತ ಡಿ.ಕೆ.ಶಿವಕುಮಾರ್‌ ಹಾಗೂ ಪರಮೇಶ್ವರ್‌ ಅಲ್ಲಿಯೇ ಉಳಿದುಕೊಂಡಿದ್ದರು.. ಅನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪರಮೇಶ್ವರ್‌ ಅವರ ಜೊತೆ ಎರಡು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ.. ಜೊತೆಗೆ ಡಿ.ಕೆ.ಶಿವಕುಮಾರ್‌ ಕೂಡಾ ನಿನ್ನೆ ದೆಹಲಿಯಲ್ಲೇ ಉಳಿದುಕೊಂಡಿದ್ದು ಬೇರೆಯದೇ ಸಂದೇಶ ರವಾನಿಸದಂತೆ ಕಾಣುತ್ತಿದೆ..

ಇದನ್ನೂ ಓದಿ; ಹುಡುಗಿಗಾಗಿ ಬೀದಿ ಕಾಳಗ; ತುಮಕೂರು-ಬೆಂಗಳೂರು ಯುವಕರ ಬಡಿದಾಟ!

ಸದ್ಯಕ್ಕೇನೋ ಕಾಂಗ್ರೆಸ್‌ನ ಎಲ್ಲಾ ಶಾಸಕರೂ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಪರವಾಗಿ ನಿಂತಿದೆ.. ಆದ್ರೆ ಸಿಎಂ ಬದಲಾವಣೆ ಮಾಡಲೇಬೇಕಾದ ಪರಿಸ್ಥಿತಿ ಬಂದಾಗ ಏನು ಮಾಡಬೇಕು ಅನ್ನೋ ಪ್ರಶ್ನೆ ಕೂಡಾ ಹೈಕಮಾಂಡ್‌ ಮುಂದಿದೆ.. ಯಾಕಂದ್ರೆ., ಮುಡಾ ಪ್ರಕರಣದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡದಿದ್ದರೆ ಸಿದ್ದರಾಮಯ್ಯ ವಿಚಾರಣೆ ಎದುರಿಸಬೇಕಾಗುತ್ತದೆ.. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲೇ ಮುಂದುವರೆಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರವಾಗುತ್ತದೆ.. ಆದ್ರೆ ಸಿದ್ದರಾಮಯ್ಯ ಅವರನ್ನು ಇಳಿಸಲು ಹೋದರೂ ಕೂಡಾ ಹೈಕಮಾಂಡ್‌ಗೆ ಕಷ್ಟವಾಗುತ್ತದೆ.. ಯಾಕಂದ್ರೆ ಕಾಂಗ್ರೆಸ್‌ನ ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಬೆನ್ನಿಗಿದ್ದಾರೆ.. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಪರಿಸ್ಥಿತಿ ಬಂದು ಬೇರೆ ಯಾರನ್ನಾದರೂ ಸಿಎಂ ಮಾಡಿದರೂ ಯಾವುದೇ ತೊಂದರೆ ಆಗಬಾರದು.. ಹಾಗೆ ಮಾಡಬೇಕಾದರೆ ಯಾರು ಸಿಎಂ ಸ್ಥಾನಕ್ಕೆ ಸೂಕ್ತ ಎಂಬುದರ ಬಗ್ಗೆ ಹೈಕಮಾಂಡ್‌ ಒಳಗೆ ಚರ್ಚೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ..

ಇದನ್ನೂ ಓದಿ; ಕಾರ್ಕಳದಲ್ಲಿ ಯುವತಿಗೆ ಮಾದಕ ವಸ್ತು ನೀಡಿ ಅತ್ಯಾಚಾರ!

ಹೀಗಾಗಿಯೇ ಕೆಲ ಹಿರಿಯ ಸಚಿವರನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ ನಾಯಕರು ಪ್ಲ್ಯಾನ್‌ ಬಿ ರೆಡಿ ಮಾಡುತ್ತಿದ್ದಾರೆ.. ಒಂದು ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಇಳಿಯಲೇಬೇಕಾದ ಪರಿಸ್ಥಿತಿ ಬಂದಾಗ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಹಿರಿಯ ಸಚಿವರಿಂದ ಅಭಿಪ್ರಾಯ ಸಂಗ್ರಹವಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.. ಖರ್ಗೆ ಹಾಗೂ ಪರಮೇಶ್ವರ್‌ ಎರಡು ಗಂಟೆ ಕಾಲ ಚರ್ಚೆ ಮಾಡಿದ್ದು ಕೂಡಾ ಈ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.. ಪರಮೇಶ್ವರ್‌ ಅವರು ದಲಿತ ಮುಖ್ಯಮಂತ್ರಿ ಕೂಗು ಎಬ್ಬಿಸಿದ್ದರು. ಸದ್ಯ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೂ ಇದ್ದಾರೆ. ಇನ್ನು ಸತೀಶ್‌ ಜಾರಕಿಹೊಳಿ ಕೂಡಾ ಸಿದ್ದರಾಮಯ್ಯ ಆಪ್ತರು.. ಇಬ್ಬರೂ ದಲಿತ ನಾಯಕರು ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ಸಿಎಂ ಮಾಡಬಹುದಾ ಎಂಬ ಚರ್ಚೆ ನಡೆದಿದೆಯಾ ಎಂಬ ಅನುಮಾನ ಇದೆ.. ಇಲ್ಲದೇ ಇದ್ದರೆ ದಲಿತ ನಾಯಕರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಜೊತೆ ಹಿರಿಯ ನಾಯಕರನ್ನೂ ಒಪ್ಪಿಸಿ ಖರ್ಗೆ ಅವರನ್ನೇ ಸಿಎಂ ಸ್ಥಾನಕ್ಕೆ ತಂದು ಕೂರಿಸಲಾಗುತ್ತಾ ಎಂಬ ಬಗ್ಗೆಯೂ ಅನುಮಾನಗಳು ಮೂಡಿವೆ… ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೂ ಸಿಎಂ ಸ್ಥಾನ ಆಸೆ ಮತ್ತೆ ಶುರುವಾದಂತೆ ಕಾಣುತ್ತಿದೆ..

Share Post