CrimeNational

ನಾನು ಅಂತಹ ಕೆಲಸ ಮಾಡಿಲ್ಲ; ಲೈವ್‌ನಲ್ಲೇ ಕಣ್ಣೀರು ಹಾಕಿದ ಬರ್ರೆಲಕ್ಕ!

ಹೈದರಾಬಾದ್‌; ಕರ್ನಾಟಕದ ಮಂಡ್ಯ ಜಿಲ್ಲೆಯ ದೇವಸ್ಥಾನವೊಂದರ 60 ವರ್ಷದ ಪೂಜಾರಿಗೆ ಆಂಧ್ರಪ್ರದೇಶದ ಮೂಲದ 20 ವರ್ಷದ ಯುವತಿ ಫೇಸ್‌ ಬುಕ್‌ ಮೂಲಕ ಪರಿಚಯವಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ ಎಂಬ ಸುದ್ದಿಯಾಗಿತ್ತು.. ಈ ಬಗ್ಗೆ ಅರ್ಚಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ, ಈ ವೇಳೆ ಯುವತಿಯೊಬ್ಬಳ ಫೋಟೋ ಮೀಡಿಯಾದವರಿಗೆ ನೀಡಲಾಗಿತ್ತು.. ಆ ಫೋಟೋ ತೋರಿಸಿಯೇ ನನಗೆ ಮೋಸ ಮಾಡಲಾಗಿದೆ ಎಂದು ಅರ್ಚಕ ಆರೋಪ ಮಾಡಿದ್ದರು..

ಇದನ್ನೂ ಓದಿ; ಇದ್ದಕ್ಕಿದ್ದಂತೆ ಮಿನಿ ವಿಮಾನ ಪತನ; ಏಳು ಮಂದಿ ದುರ್ಮರಣ!

ಆದ್ರೆ ವೈರಲ್‌ ಆದ ಆ ಯುವತಿ ಫೋಟೋ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರೆಯಾಗಿ ಸ್ಪರ್ಧಿಸಿ ದೇಶಾದ್ಯಂತ ಸುದ್ದಿ ಮಾಡಿದ್ದ ಬರ್ರೆಲಕ್ಕ ಅಲಿಯಾಸ್‌ ಕರ್ನೆ ಶಿರಿಷಾ ಅವರದ್ದು ಎಂದು ಗೊತ್ತಾಗಿದೆ.. ಈ ಸುದ್ದಿ ನೋಡುತ್ತಿದ್ದಂತೆ ಆಕೆಗೆ ಪರಿಚಯದವರು ಫೋನ್‌ ಮಾಡಿ ಏನಾಯಿತು ಎಂದು ಕೇಳುತ್ತಿದ್ದಾರಂತೆ.. ಇದರಿಂದ ಆತಂಕಗೊಂಡ ಬರ್ರೆಲಕ್ಕ ಅಳತ್ತಲೇ ಲೈವ್‌ ವಿಡಿಯೋ ಮಾಡಿ ಕ್ಲಾರಿಫಿಕೇಷನ್‌ ಕೊಟ್ಟಿದ್ದಾರೆ.. ನಾನು ಅಂತಹ ಯಾವುದೇ ತಪ್ಪು ಮಾಡಿಲ್ಲ.. ನನ್ನ ಫೋಟೋ ಯಾಕೆ ತೋರಿಸುತ್ತಿದ್ದಾರೋ ಗೊತ್ತಿಲ್ಲ.. ಈ ಬಗ್ಗೆ ನಾನು ಪೊಲೀಸರ ಜೊತೆ ಕೂಡಾ ಮಾತನಾಡಿ ಕ್ಲಾರಿಫಿಕೇಷನ್‌ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಮೆಗಾಪ್ಲ್ಯಾನ್‌ ಜೊತೆ ದೆಹಲಿಯತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌

ಈ ಬಗ್ಗೆ ನನ್ನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿರುವುದರಿಂದ ನನಗೆ ನೋವಾಗಿದೆ. ನಾನು ಜನರ ಪರ ನ್ಯಾಯಕ್ಕಾಗಿ ಹೋರಾಡುತ್ತೇನೆ.. ನಾನು ಅಂತಹ ಕೆಲಸಗಳನ್ನು ಮಾಡೋದಿಲ್ಲ ಎಂದು ಬರ್ರೆಲಕ್ಕ ಸ್ಪಷ್ಟನೆ ನೀಡಿದ್ದಾರೆ..

Share Post