BengaluruPolitics

163ನೇ ವಿಧಿ ಏನು ಹೇಳುತ್ತೆ..?; ರಾಜ್ಯಪಾಲರಿಗೆ ಸಲಹೆ ನೀಡುವ ಹಕ್ಕು ಸಂಪುಟಕ್ಕಿದೆಯಾ..?

ಬೆಂಗಳೂರು; ಮುಡಾ ಹಗರಣದ ತಿಕ್ಕಾಟದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ.. ಅವರನ್ನು ಪಾರು ಮಾಡೋದಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ.. ಆಗಸ್ಟ್‌ 29 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಅತ್ಯಂತ ಮಹತ್ವದ್ದೆನಿಸಿದೆ.. ಹೀಗಿರುವಾಗಲೂ ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೇ ಸಲಹೆ ನೀಡುವಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ..

ಇದನ್ನೂ ಓದಿ; ಗಂಡನ ಎರಡನೇ ಮದುವೆಯಲ್ಲಿ ಮೊದಲ ಹೆಂಡತಿಯ ರಂಪಾಟ!

ಇಂದು ಬೆಳಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದೆ.. ಈ ಸಭೆಯಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಈ ಮೂಲಕ ಮೈತ್ರಿ ನಾಯಕರಿಗೆ ಟಾಂಗ್‌ ಕೊಡುವ ಪ್ರಯತ್ನ ನಡೆದಿದೆ.. ಇನ್ನು ಬಿಜೆಪಿ, ಜೆಡಿಎಸ್‌ ನಾಯಕರ ವಿರುದ್ಧದ ಪ್ರಕರಣಗಳ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಬಹುದು..

ಇದನ್ನೂ ಓದಿ; 20ರ ಮಾಯಾಂಗನೆಗೆ ಲಕ್ಷ ಲಕ್ಷ ಕಾಣಿಕೆ ಕೊಟ್ಟು ಮೋಸಹೋದ 60ರ ಅರ್ಚಕ..!

ರಾಜ್ಯ ಸಚಿವ ಸಂಪುಟ ಸಂವಿಧಾನದ ವಿಧಿ 163ರ ಅಡಿ ಅಧಿಕಾರ ಚಲಾಯಿಸಲು ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.. ಈ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಸಲಹೆ ನೀಡುವ ಬಗ್ಗೆ ಇಂದು ತೀರ್ಮಾನ ಆಗುವ ಸಾಧ್ಯತೆ ಇದೆ.. 163 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ಸಚಿವ ಸಂಪುಟಕ್ಕೆ ಇದೆ.. ಇದನ್ನು ಬಳಸಿಕೊಂಡು, ಬಾಕಿ ಇರುವ ಬಿಜೆಪಿ, ಜೆಡಿಎಸ್‌ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್‌ ಅರ್ಜಿಗಳ ಶೀಘ್ರ ವಿಲೇವಾರಿಗೆ ರಾಜ್ಯಪಾಲರಿಗೆ ಸಲಹೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ..
ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮರುಗೇಶ್‌ ನಿರಾಣಿ, ಜನಾರ್ದನರೆಡ್ಡಿ ವಿರುದ್ಧ ಪ್ರಕರಣಗಳನ್ನು ಮುಖ್ಯವಾಗಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ; ಅಗತ್ಯ ಇದ್ದರೆ ಕುಮಾರಸ್ವಾಮಿ ಬಂಧನವಾಗುತ್ತೆ; ಸಿದ್ದರಾಮಯ್ಯ

Share Post