CrimeDistricts

ಗಂಡನ ಎರಡನೇ ಮದುವೆಯಲ್ಲಿ ಮೊದಲ ಹೆಂಡತಿಯ ರಂಪಾಟ!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದ ಸಿಎಸ್‌ಐ ಚರ್ಚ್‌ನಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಮಹಿಳೆಯೊಬ್ಬರು ರಂಪಾಟ ಮಾಡಿದ್ದಾರೆ.. ನನಗೆ ಡಿವೋರ್ಸ್‌ ಕೊಡದೇ ನನ್ನ ಗಂಡ ಇನ್ನೊಂದು ಮದುವೆಯಾಗುತ್ತಿದ್ದಾನೆಂದು ಆಕೆ ಗಲಾಟೆ ಮಾಡಿದ್ದಾಳೆ.. ಚರ್ಚ್‌ನಲ್ಲಿ ಮೋಹನ್‌ ಕಾಂತ್‌ ಹಾಗೂ ಗ್ಲೋರಿ ಎಂಬುವವರ ಮದುವೆ ಆಯೋಜನೆ ಮಾಡಲಾಗಿತ್ತು.. ಎಲ್ಲಾ ಕಾರ್ಯಕ್ರಮಗಳೂ ಸುಸೂತ್ರವಾಗಿ ನಡೆದಿದ್ದವು.. ಇದೇ ವೇಳೆ ಆಗಮಿಸಿದ ಮೋಹನ್‌ ಕಾಂತ್‌ ಪತ್ನಿ ರಶ್ಮಿ, ತನಗೆ ಡಿವೋರ್ಸ್‌ ಕೊಡದೇ ನನ್ನ ಗಂಡ ಎರಡನೇ ಮದುವೆಯಾಗುತ್ತಿದ್ದಾನೆ. ನನ್ನ ಹಾಗೂ ನನ್ನ ಮಗುವಿಗೆ ಯಾರು ದಿಕ್ಕು ಎಂದು ಗಲಾಟೆ ಮಾಡಿದ್ದಾರೆ..
ಇದನ್ನೂ ಓದಿ; 20ರ ಮಾಯಾಂಗನೆಗೆ ಲಕ್ಷ ಲಕ್ಷ ಕಾಣಿಕೆ ಕೊಟ್ಟು ಮೋಸಹೋದ 60ರ ಅರ್ಚಕ..!

ಆದ್ರೆ ಮೋಹನ್‌ ಕಾಂತ್‌ ಹೇಳೋದೇ ಬೇರೆ.. ನಾನು ರಶ್ಮಿಗೆ ಕಾನೂನು ಪ್ರಕಾರ ಡಿವೋರ್ಸ್‌ ನೀಡಿದ್ದೇನೆ.. ಈಗ ಕಾನೂನು ಪ್ರಕಾರವೇ ಎರಡನೇ ಮದುವೆಯಾಗುತ್ತಿದ್ದೇನೆ ಎಂದು ಡಿವೋರ್ಸ್‌ ಪತ್ರಿ ತೋರಿಸಿದ್ದಾನೆ.. ಆದ್ರೆ ಇದಕ್ಕೆ ರಶ್ಮಿ ಇನ್ನೂ ಡಿವೋರ್ಸ್‌ ಆಗಿಲ್ಲ ಎಂದು ಹೇಳುತ್ತಿದ್ದಾರೆ.. ಇದರಿಂದಾಗಿ ಮದುವೆ ಸಮಾರಂಭದಲ್ಲಿ ರಾದ್ದಾಂತಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ಪ್ರಧಾನಿ ಹುದ್ದೆ ಬಿಟ್ಟುಕೊಡಿ, ಇಲ್ಲದಿದ್ದರೆ ಇಳಿಸ್ತೀವಿ; ಮೋದಿಗೆ ಬಿಜೆಪಿ ನಾಯಕ ವಾರ್ನಿಂಗ್‌

2018ರಲ್ಲಿ ಮೋಹನ್‌ ಕಾಂತ್‌ ಜಾಗೂ ರಶ್ಮಿ ವಿವಾಹವಾಗಿತ್ತು.. ಇವರಿಗೆ ಒಂದು ಮಗು ಕೂಡಾ ಇದೆ.. ಆದ್ರೆ ದಾಂಪತ್ಯದಲ್ಲಿ ವಿರಸದಿಂದಾಗಿ ಇಬ್ಬರೂ ಬೇರೆಬೇರೆಯಾಗಿ ವಾಸಿಸುತ್ತಿದ್ದರು.. ರಶ್ಮಿ ತನಗೂ ಹಾಗೂ ತನ್ನ ಮಗಳಿಗೂ ಜೀವನಾಂಶ ನೀಡಬೇಕೆಂದು ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದಾಳೆ.. ಆದ್ರೆ ಮೋಹನ್‌ ಕಾಂತ್‌ ಮಾತ್ರ 2022ರಲ್ಲೇ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳುತ್ತಿದ್ದಾರೆ..

Share Post