CrimeNational

ಬಸ್‌ನಲ್ಲೇ ಯುವತಿ ಮೇಲೆ 5 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

ಡೆಹ್ರಾಡೂನ್‌; ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.. ಹೀಗಿರುವಾಗಲೇ ಉತ್ತರಾಖಂಡದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಎಸಗಲಾಗಿದೆ.. ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಐದು ಮಂದಿ ಕಾಮುಕರು ಬಲವಂತದಿಂದ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.. ಡೆಹ್ರಾಡೂನ್‌ನ ಅಂತಾರಾಜ್ಯ ಬಸ್‌ ಟ್ರಮಿನಲ್‌ನಲ್ಲಿ ಈ ಕೃತ್ಯ ಎಸಗಲಾಗಿದೆ.. ಬಸ್‌ನ ಡ್ರೈವರ್‌, ಕಂಡಕ್ಟರ್‌, ಕ್ಯಾಶಿಯರ್‌ ಹಾಗೂ ಇತರ ಇಬ್ಬರು ಚಾಲಕರೇ ಆ ಕಾಮುಕ ಪಿಶಾಚಿಗಳು ಎಂದು ಗೊತ್ತಾಗಿದೆ..

ಇದನ್ನೂ ಓದಿ; ಜಮೀನಿಗಾಗಿ ದಯಾದಿಗಳ ಕಲಹ; ಒಬ್ಬರ ಕೊಲೆ!

ಬಸ್‌ ನಿಲ್ದಾಣದಲ್ಲಿ ಯುವತಿ ಒಬ್ಬಳೇ ನಡುರಾತ್ರಿಯಲ್ಲಿ ಕೂತಿರುವುದನ್ನು ನೋಡಿದ್ದ ವ್ಯಕ್ತಿಯೊಬ್ಬರು ಡೆಹ್ರಾಡೂನ್‌ ಮಕ್ಕಳ ಕಲ್ಯಾಣ ಸಮಿತಿಗೆ ಕರೆ ಮಾಡಿ ತಿಳಿಸಿದ್ದ.. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಆಕೆಯನ್ನು ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿದಾಗ ಸಾಮೂಹಿಕ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ.. ಯುವತಿ ಮೊದಲಿಗೆ ನಾನು ಪಂಜಾಬಿನವಳು, ನನಗೆ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಳು.. ಆದ್ರೆ, ಆಕೆಗೆ ಧೈರ್ಯ ತುಂಬಿ ಮಾಹಿತಿ ಸಂಗ್ರಹಿಸಿದಾಗ ಆಕೆಯ ಮೂಲ ಉತ್ತರಪ್ರದೇಶ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮ.2.30ರ ನಂತರ ಸಿದ್ದರಾಮಯ್ಯ ಅರ್ಜಿ ವಿಚಾರಣೆ; ಶರುವಾಯ್ತು ಢವಢವ!

ಯುವತಿ ಆಗಸ್ಟ್‌ 12ರಂದು ದೆಹಲಿಯಿಂದ ಡೆಹ್ರಾಡೂನ್‌ಗೆ ISBT ಬಸ್‌ನಲ್ಲಿ ಹೊರಟಿದ್ದಳು ಎಂದು ತಿಳಿದುಬಂದಿದೆ.. ಡೆಹ್ರಾಡೂನ್‌ ಬಸ್‌ ಟರ್ಮಿನಲ್‌ ಗೆ ಬಸ್‌ ಬಂದಾಗ ರಾತ್ರಿಯಾಗಿದೆ.. ಈ ವೇಳೆ ಒಬ್ಬಳೇ ಇದ್ದ ಯುವತಿಯನ್ನು ಕಂಡ ಬಸ್‌ ಡ್ರೈವರ್‌ ಮತ್ತಿತರ ಸಾರಿಗೆ ಇಲಾಖೆ ನೌಕರರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.. ಪೊಲೀಸರು ಆರೋಪಿಗಳಾದ ಧರ್ಮೇಂದ್ರ ಕುಮಾರ್‌(32), ರಾಜ್‌ಪಾಲ್‌(57), ದೇವೇಂದ್ರ (52), ರಾಜೇಶ್‌ ಕುಮಾರ್‌ ಸೋನಕ್‌(38), ಹಾಗೂ ರವಿಕುಮಾರ್(34) ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಜಪ್ತಿ ಮಾಡಿದ್ದ 72 ಲಕ್ಷ ರೂ. ದುರ್ಬಳಕೆಮಾಡಿಕೊಂಡ ಪೊಲೀಸಪ್ಪ!

 

Share Post