ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟರೆ ಮುಂದಿನ ಸಿಎಂ ಯಾರು..?
ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.. ಆದ್ರೆ ಇದರ ವಿರುದ್ಧ ಹೋರಾಡೋದಕ್ಕೆ ಕಾಂಗ್ರೆಸ್ ನಿರ್ಧಾರ ಮಾಡಿದೆ. ಕಾನೂನು ಹೋರಾಟದ ಜೊತೆಗೆ ರಾಜ್ಯಾದ್ಯಂತ ಪ್ರತಿಭಟನೆಗೂ ಸಿದ್ಧತೆ ನಡೆಸಲಾಗಿದೆ.. ಇನ್ನು ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.. ಒಂದು ವೇಳೆ ಹೈಕೋರ್ಟ್ ರಾಜ್ಯಪಾಲರ ಆದೇಶಕ್ಕೆ ತಡೆ ನೀಡದಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು.. ಅಲ್ಲೂ ಗೆಲುವು ಸಿಗದೇ ಹೋದರೆ ಸಿಎಂಗೆ ಸಂಕಷ್ಟ ತಂದೊಡ್ಡಬಹುದು.. ಒಂದು ವೇಳೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಮುಂದೆ ಯಾರು ಸಿಎಂ ಆಗಬಹುದು.. ಮುಂದಿನ ಆಯ್ಕೆ ಯಾರು ನೋಡೋಣ ಬನ್ನಿ..
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಆ ಸ್ಥಾನದ ಆಕಾಂಕ್ಷಿಗಳಲ್ಲಿ ಪ್ರಮುಖರು ಡಿಸಿಎಂ ಡಿ.ಕೆ.ಶಿವಕುಮಾರ್, ದಲಿತ ಸಿಎಂ ಕೂಗು ಇರುವುದರಿಂದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಕೂಡಾ ರೇಸ್ನಲ್ಲಿ ನಿಲ್ಲುತ್ತಾರೆ.. ಇದರ ಜೊತೆಗೆ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕುವುದಾದರೆ ಎಂ.ಬಿ.ಪಾಟೀಲ್ ಮುಂಚೂಣಿಗೆ ಬರುತ್ತಾರೆ.. ಹಾಗಾದ್ರೆ ಈ ನಾಯಕರ ಸ್ಟ್ರೆಂತ್ ಏನು ನೋಡೋಣ ಬನ್ನಿ..
ಡಿ.ಕೆ.ಶಿವಕುಮಾರ್;
2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರಲ್ಲಿ ಡಿ.ಕೆ.ಶಿವಕುಮಾರ್ ಕೂಡಾ ಪ್ರಮುಖರು.. ಕೆಪಿಸಿಸಿ ಅಧ್ಯಕ್ಷರೂ ಆಗಿದ್ದರಿಂದ ಅವರೇ ಸಿಎಂ ಸ್ಥಾನ ಬಯಸಿದ್ದರು.. ಆದ್ರೆ ಅದು ಸಾಧ್ಯವಾಗಲಿಲ್ಲ.. ಇದೀಗ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವರೇ ಸಿಎಂ ಹುದ್ದೆ ಕೇಳಬಹುದು.. ಹೈಕಮಾಂಡ್ ನಾಯಕರಿಗೆ ಹತ್ತಿರದವರೂ ಆಗಿರುವುದರಿಂದ ಡಿ.ಕೆ.ಶಿವಕುಮಾರ್ ಅವರು ಸಿಎಂ ಹುದ್ದೆಗೆ ಬೇಡಿಕೆ ಇಡಬಹುದು..
ಆದ್ರೆ, ಡಿ.ಕೆ.ಶಿವಕುಮಾರ್ ವಿರುದ್ಧವೂ ಹಲವು ಪ್ರಕರಣಗಳಿವೆ.. ಅವರ ವಿರುದ್ಧ ಸಿಬಿಐ, ಇಡಿ ವಿಚಾರಣೆ ನಡೆಯುತ್ತಿದೆ.. ಹೀಗಾಗಿ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿದರೆ, ಮುಂದಿನ ದಿನಗಳಲ್ಲಿ ವಿಚಾರಣೆ ಎದುರಿಸುವ ಅವಶ್ಯಕತೆ ಬಂದರೆ ಮತ್ತೆ ಕಷ್ಟವಾಗಬಹುದು.. ಹೀಗಾಗಿ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕೊಡಲು ನೋ ಎನ್ನಬಹುದು.. ಜೊತೆಗೆ ಸಿದ್ದರಾಮಯ್ಯ ಪಾಳಯದ ಗುಂಪು ಹಾಗೂ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಡಿ.ಕೆ.ಶಿವಕುಮಾರ್ ಬಗ್ಗೆ ಅಷ್ಟೊಂದು ಒಲವಿಲ್ಲ ಅನ್ನೋದು ಸಾಕಷ್ಟು ಬಾರಿ ಸಾಬೀತಾಗಿದೆ..
ಮಲ್ಲಿಕಾರ್ಜುನ ಖರ್ಗೆ;
ಕಾಂಗ್ರೆಸ್ ಹೈಕಮಾಂಡ್ ದಲಿತರ ಮತಬ್ಯಾಂಕ್ ಬಳಸಿಕೊಳ್ಳುತ್ತೆ, ಆದ್ರೆ ದಲಿತರಿಗೆ ಅಧಿಕಾರ ಕೊಡುವುದಿಲ್ಲ ಎಂಬ ಅಪವಾದವಿದೆ.. ಕರ್ನಾಟಕದಲ್ಲೂ ಕೂಡಾ ದಲಿತ ಸಿಎಂ ಕೂಗು ಮೊದಲಿನಿಂದಲೂ ಇದೆ.. ಈ ನಡುವೆ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕರೂ ಆಗಿದ್ದಾರೆ.. ಇವರಿಗೆ ಸಿಎಂ ಸ್ಥಾನದ ಮೇಲೆ ಒಲವಿದೆ.. ಜೊತೆಗೆ ರಾಷ್ಟ್ರ ರಾಜಕಾರಣದ ಮೇಲೆ ಅಷ್ಟೊಂದು ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.
ಹೈಕಮಾಂಡ್ಗೆ ನಿಷ್ಟರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯ ರಾಜಕಾರಣಕ್ಕೆ ವಾಪಸ್ ಕಳುಹಿಸುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬಹುದು.. ಖರ್ಗೆ ಸಿಎಂ ಆಗುವುದಾದರೆ ಯಾವ ವಿರೋಧವೂ ವ್ಯಕ್ತವಾಗೋದಿಲ್ಲ.. ಇನ್ನು ಖರ್ಗೆಯವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸಿದರೆ, ರಾಜ್ಯಸಭಾ ಸದಸ್ಯರಾಗಿರುವ ಸೋನಿಯಾಗಾಂಧಿ ಮತ್ತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕಿಯಾಗಬಹುದು.. ಪುನಃ ಎಐಸಿಸಿ ಅಧ್ಯಕ್ಷೆಯಾಗುವುದಕ್ಕೂ ಅವಕಾಶ ಸಿಗಬಹುದು..
ಜಿ.ಪರಮೇಶ್ವರ್;
2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಜಿ.ಪರಮೇಶ್ವರ್ ಅವರು.. ಅವರೇ ಸಿಎಂ ಸ್ಥಾನವನ್ನು ಬಯಸಿದ್ದರು.. ಹಿಂದಿನ ಸಂಪ್ರದಾಯವನ್ನು ಪರಿಗಣನೆಗೆ ತೆಗೆದುಕೊಂಡಿದ್ದರೆ, ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಸ್ಥಾನ ಕೊಡಬೇಕಾಗಿತ್ತು.. ಆದ್ರೆ ಆಗಲೂ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಕಟ್ಟಲಾಯಿತು.. ಇದರಿಂದ ರಾಜ್ಯದ ದಲಿತರು ಕಾಂಗ್ರೆಸ್ನಲ್ಲಿ ಮುನಿಸಿಕೊಂಡಿದ್ದರು.. ಆ ಸಮಯದಲ್ಲಿ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಕೂಡಾ ಇದೇ ಕಾರಣಕ್ಕೆ ಎಂಬ ಆರೋಪವಿದೆ.. ಹೀಗಾಗಿ, ದಲಿತ ಹಾಗೂ ಶಿಕ್ಷಿತ ನಾಯಕ ಜಿ.ಪರಮೇಶ್ವರ್ಗೆ ಮಣೆ ಹಾಕಿದರೂ ಆಶ್ಚರ್ಯವಿಲ್ಲ..
ಸತೀಶ್ ಜಾರಕಿಹೊಳಿ;
ಸತೀಶ್ ಜಾರಕಿಹೊಳಿ ಕೂಡಾ ದಲಿಯ ನಾಯಕರು.. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ನಾಯಕ.. ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡವರು.. ಹೀಗಾಗಿ ಸಿದ್ದರಾಮಯ್ಯ ಪಾಳಯ ದಲಿತ ಸಿಎಂ ಮಾಡುವುದಾದರೆ ಸತೀಶ್ ಜಾರಕಿಹೊಳಿಯವರನ್ನು ಸಿಎಂ ಮಾಡಿ ಎಂಬ ಬೇಡಿಕೆ ಮುಂದಿಡಬಹುದು.