BengaluruCrimePolitics

ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಏನೇನು ಅನುಮತಿ ಕೊಟ್ಟಿದ್ದಾರೆ..?

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಯ ಅನುಮತಿ ನೀಡಿದ್ದಾರೆ.. ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ.ಅಬ್ರಹಾಂ, ಪ್ರದೀಪ್‌ ಕುಮಾರ್‌ ಹಾಗೂ ಸ್ನೇಹಮಯಿ ಕೃಷ್ಣ ಅವರ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದಾರೆ.. ಹಾಗಾದರೆ ರಾಜ್ಯಪಾಲರು ನೀಡಿರುವ ಅನುಮತಿಯಲ್ಲಿ ಯಾವ್ಯಾವ ಅಂಶಗಳು ಪ್ರಸ್ತಾಪವಾಗಿವೆ.. ಯಾವ ಸೆಕ್ಷನ್‌ ಅಡಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಅನುಮತಿ ನೀಡಿದ್ದಾರೆ ಎಂಬ ವಿಚಾರದ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಇದನ್ನೂ ಓದಿ; Breaking; ಸಂಜೆ ನಡೆಯಬೇಕಿದ್ದ ಸಂಪುಟ ಸಭೆ ರದ್ದು!

ಪ್ರದೀಪ್‌ ಕುಮಾರ್‌, ಟಿ.ಜೆ.ಅಬ್ರಹಾಂ ಹಾಗೂ ಸ್ನೇಹಮಯಿ ಕೃಷ್ಣ ನೀಡಿರುವ ದೂರುಗಳನ್ನು ಆಧರಿಸಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.. ಪಿಸಿ ಆ್ಯಕ್ಟ್ ಸೆಕ್ಷನ್​ 17ಎ ಮತ್ತು ಬಿಎನ್ಎಸ್ಎಸ್ 218 ಅಡಿ ತನಿಖೆಗೆ ಅನುಮತಿ ಕೊಡಲಾಗಿದೆ.. ಭ್ರಷ್ಟಚಾರ ತಡೆ ಕಾಯ್ದೆ 17ಎ, 19 & ಬಿಎನ್ಎಸ್​ಎಸ್ 218, ಭಷ್ಟಚಾರ ತಡೆ ಕಾಯ್ದೆ 7,9,12 & 15 ರಡಿ ಆರೋಪಕ್ಕೆ ಅನುಮತಿ ನೀಡಲಾಗಿದೆ.. ಇದರಲ್ಲಿ ಸೆಕ್ಷನ್‌ 59, 61, 62, 201, 227, 228, 229, 314, 316(5), 318(2), 318(3), 319, 322, 324, 324(1), 324(2), 324(2), 335, 336, 338 & 340 ಅನ್ನು ಪ್ರಸ್ತಾಪಿಸಿ ಅನುಮತಿ ನೀಡಲಾಗಿದೆ..

ಇದನ್ನೂ ಓದಿ; ಮುಡಾ ಹಗರಣ; ನಾಯಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದ್ದೇನು..?

Share Post