International

ಚೀನಾ ಕಾರುಗಳ ʻಬೇಬಿ ಬಂಪ್‌ʼ ಸಖತ್‌ ವೈರಲ್‌!; ಗರ್ಭಿಣಿಯಾಗುತ್ತಿವೆ ಕಾರುಗಳು!

ಬೀಜಿಂಗ್‌; ಪ್ರಾಣಿಗಳು ಗರ್ಭ ಧರಿಸೋದಕ್ಕೆ ನೋಡಿದ್ದೇವೆ.. ಆದ್ರೆ ಕಾರುಗಳು ಗರ್ಭಿಣಿಯಾಗೋದನ್ನು ಎಲ್ಲಾದರೂ ನೋಡಿದ್ದೀರಾ..?. ಚೀನಾದಲ್ಲಿ ಹಲವು ಕಡೆ ಇಂತಹ ದೃಶ್ಯಗಳ ಕಾಣಿಸುತ್ತಿವೆ.. ಕಾರು ಬಾನೆಟ್‌ಗಳು ಗರ್ಭಿಣಿಯರಂತೆ ಊದಿಕೊಂಡಿವೆ.. ಬಲೂನಿನಂತೆ ಉಬ್ಬಿವೆ.. ಕಾರುಗಳು ಗರ್ಭ ಧರಿಸಿವೆ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.. ‘ಬೇಬಿ ಬಂಪ್’ ಇರುವ ಕಾರಿನ ಈ ವಿಚಿತ್ರ ವಿದ್ಯಮಾನ ಜನರಲ್ಲಿ ಕುತೂಹಲ ಮತ್ತು ಆತಂಕದ ವಾತಾವರಣ ಸೃಷ್ಟಿ ಮಾಡಿದೆ.

ಇದನ್ನೂ ಓದಿ; ಇಂದಿನಿಂದ ತ್ರಿಗಾಹಿ ಯೋಗ; ಇವರು ಮುಟ್ಟಿದ್ದೆಲ್ಲಾ ಚಿನ್ನ!

ಅಷ್ಟಕ್ಕೂ ಈ ಮೇಡ್‌ ಚೀನಾ ಕಾರುಗಳು ಯಾಕೆ ಗರ್ಭಿಣಿಯಾಗುತ್ತಿವೆ..? ಅನ್ನೋದನ್ನು ನೋಡೋಣ.. ಚೀನಾದಲ್ಲಿ ಈಗ ವಿಪರೀತ ಸೆಖೆ ಇದೆ.. ಹವಾಮಾನವು ಬಿಸಿಯಾಗಿರುವಾಗ ಮೇಡ್-ಇನ್-ಚೀನಾ ಕಾರುಗಳು ಗರ್ಭಿಣಿಯಾಗುತ್ತವೆ. ಕಾರಿನ ಬಣ್ಣವನ್ನು ರಕ್ಷಿಸಲು ವಿನೈಲ್ ಫಿಲ್ಮ್‌ಗಳನ್ನು ಬಳಸಲಾಗುತ್ತದೆ. ಈ ವಿನೈಲ್ ಫಿಲ್ಮ್‌ಗಳು ಹೆಚ್ಚಿನ ತಾಪಮಾನ ಮತ್ತು ಪ್ರಖರವಾದ ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಂಡಾಗ, ಅವುಗಳ ಮೂಲ ರಚನೆಯು ಬದಲಾಗುತ್ತದೆ.

ಇದನ್ನೂ ಓದಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌-2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ

Share Post