BengaluruCrime

ಕಾಫಿ ಶಾಪ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ಆರೋಪಿ ಯಾರು ಗೊತ್ತಾ..?

ಬೆಂಗಳೂರು; ಬೆಂಗಳೂರಿನ ಬಿಇಎಲ್‌ ರಸ್ತೆಯಲ್ಲಿರುವ ಕಾಫಿ ಶಾಪ್‌ನ ಮಹಿಳೆಯರ ವಾಶ್‌ ರೂಮ್‌ನಲ್ಲಿ ಮೊಬೈಲ್‌ ಇಟ್ಟು ರೆಕಾರ್ಡ್‌ ಮಾಡಲಾಗಿದೆ.. ಇದನ್ನು ಗಮನಿಸಿದ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.. ವಾಶ್‌ ರೂಮ್‌ನ ಡಸ್ಟ್‌ಬಿನ್‌ ನಲ್ಲಿ ಒಂದು ರಂಧ್ರಮಾಡಿ ಅಲ್ಲಿ ಮೊಬೈಲ್‌ ಅಂಟಿಸಿ ರೆಕಾರ್ಡ್‌ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಆ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಆಗಿತ್ತು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ..?; Full Deatails

ಕೆಫೆ ಸಿಬ್ಬಂದಿಯಾಗಿದ್ದ ಭದ್ರಾವತಿ ಮೂಲದ ಯುವಕನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.. ಆರೋಪಿಯ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ… ಮೊಬೈಲ್‌ ಫಿಕ್ಸ್‌ ಮಾಡುವಾಗ ಕಾಲ್‌, ಮೆಸೇಜ್‌ಗಳು ಬರದಂತೆ ಅದನ್ನು ಫ್ಲೈಟ್‌ ಮೋಡ್‌ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ.. ಪೊಲೀಸರು ಆ ಮೊಬೈಲ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ 23 ವರ್ಷದ ಮನೋಜ್‌ ಎಂಬಾತನೇ ಬಂಧಿತ ಆರೋಪಿಯಾಗಿದಾನೆ.. ಈತ ಕಾಫಿ ಶಾಪ್‌ನಲ್ಲಿ ಕಾಫಿ ಮೇಕರ್‌ ಆಗಿದ್ದ ಎಂದು ತಿಳಿದುಬಂದಿದೆ.. ಎಷ್ಟು ದಿನದಿಂದ ಆತ ಈ ಕೆಲಸ ಮಾಡುತ್ತಿದ್ದನೋ ಗೊತ್ತಿಲ್ಲ..

ಇದನ್ನೂ ಓದಿ; ತುಂಗಭದ್ರಾ ಡ್ಯಾಮ್‌ ಬಳಿ ಆತಂಕ; ಹೈವೋಲ್ಟೇಜ್‌ ಮೀಟಿಂಗ್‌!

Share Post