BengaluruCrime

ಬೆಂಗಳೂರಿನಲ್ಲಿ ನಾಪತ್ತೆಯಾದ 485 ಹುಡುಗಿಯರ ಪತ್ತೆಯೇ ಇಲ್ಲ!

ಬೆಂಗಳೂರು; ಬೆಂಗಳೂರಿನಲ್ಲಿ ವಯಸ್ಕ ಹುಡುಗಿಯರು ಹಾಗೂ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ.. ಕಳೆದ 12 ವರ್ಷಗಳಲ್ಲಿ ಬೆಂಗಳೂರಿನಲ್ಲಿ 485 ಮಂದಿ ಹುಡುಗಿಯರು ಹಾಗೂ ಮಹಿಳೆಯರು ನಾಪತ್ತೆಯಾಗಿದ್ದಾರಂತೆ.. ಆದ್ರೆ ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ಜೊತೆಗೆ ಪತ್ತೆಯೂ ಆಗಿಲ್ಲ.. ಕೇಸ್‌ ದಾಖಲಾದ ಪ್ರಕರಣಗಳು ಇಷ್ಟಾದರೆ ಕೇಸ್‌ ದಾಖಲಾಗದ ಪ್ರಕರಣಗಳು ಇನ್ನೆಷ್ಟಿದ್ದಾವೋ ಗೊತ್ತಿಲ್ಲ..

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿ ಯತ್ನ; ಸ್ಫೋಟಗೊಂಡ 5 ಮಕ್ಕಳಿಗೆ ಗಾಯ!

ಬೆಂಗಳೂರಿನಲ್ಲಿ 19ರಿಂದ 21 ವರ್ಷದೊಳಗಿನ 173 ಯುವತಿಯರು ನಾಪತ್ತೆಯಾಗಿದ್ದಾರಂತೆ.. ಇದರ ಜೊತೆಗೆ 16 ವರ್ಷದೊಳಗಿನ 162, 17-18ವರ್ಷದ 92 ಹುಡುಗಿಯರು ಕೂಡಾ ನಾಪತ್ತೆಯಾಗಿದ್ದು, ಇದುವರೆಗೂ ಸಿಕ್ಕಿಲ್ಲ.. ಇನ್ನು 22 ವರ್ಷ ಮೇಲ್ಪಟ್ಟ 58 ಮಹಿಳೆಯರು ನಾಪತ್ತೆಯಾಗಿದ್ದು, ಇನ್ನೂ ಪತ್ತೆಯೇ ಆಗಿಲ್ಲ..

 

Share Post