DistrictsPolitics

ನಾಳೆ ಮೈಸೂರಲ್ಲಿ ಕಾಂಗ್ರೆಸ್‌ ಸಮಾವೇಶ; ಅಷ್ಟಕ್ಕೂ ಏಕೆ ಈ ಜನಾಂದೋಲನ..?

ಮೈಸೂರು; ನಾಡಿದ್ದು ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಮೈಸೂರು ತಲುಪುತ್ತಿದೆ.. ಅದಕ್ಕೂ ಒಂದು ದಿನ ಮುಂಚೆ ಅಂದರೆ ನಾಳೆ ಮೈಸೂರಿನಲ್ಲಿ ಕಾಂಗ್ರೆಸ್‌ ಬೃಹತ್‌ ಶಕ್ತಿ ಪ್ರದರ್ಶನ ನಡೆಸುತ್ತಿದೆ.. ಜನಾಂದೋಲ ಸಮಾವೇಶದ ಹೆಸರಲ್ಲಿ ಒಟ್ಟು 2 ಲಕ್ಷ ಜನ ಸೇರಿಸಲು ಕಾಂಗ್ರೆಸ್‌ ಸಜ್ಜಾಗಿದೆ.. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ.. ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಈ ಬೃಹತ್‌ ಸಮಾವೇಶ ಆಯೋಜನೆ ಮಾಡಲಾಗಿದೆ..
ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುತ್ತಿದ್ದಾರೆ… ಇತ್ತ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಚಾರವಾಗಿ ರಾಜ್ಯಪಾಲರು ಸರ್ಕಾರಕ್ಕೆ ನೋಟಿಸ್‌ ಕೂಡಾ ಕೊಟ್ಟಿದ್ದಾರೆ.. ಅದಕ್ಕೆ ಸರ್ಕಾರದಿಂದ ಉತ್ತರವನ್ನೂ ಕೊಡಲಾಗಿದೆ.. ಈ ನಡುವೆ ಕಾಂಗ್ರೆಸ್‌ ಪಕ್ಷ ಬಿಜೆಪಿ-ಜೆಡಿಎಸ್‌ ಹೋರಾಟಕ್ಕೆ ದಿಟ್ಟ ಉತ್ತರ ಕೊಡೋಕೆ ಮುಂದಾಗಿದೆ.. ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ಹೋರಾಟವನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಒಂದು ದಿನದ ಮೊದಲೇ ಉತ್ತರಗಳ ಬಾಣಗಳನ್ನು ಬಿಡಲು ರೆಡಿಯಾಗಿದ್ದಾರೆ..

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿ ಯತ್ನ; ಸ್ಫೋಟಗೊಂಡ 5 ಮಕ್ಕಳಿಗೆ ಗಾಯ!

ನಿನ್ನೆಯಷ್ಟೇ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಿದ್ದರಾಮಯ್ಯ ಅವರು ಮೈಸೂರು ಸಮಾವೇಶದಲ್ಲೇ ಹಲವು ದಾಖಲೆಗಳನ್ನು ಬಿಡುಗಡೆ ಮಾಡೋದಾಗಿ ಹೇಳಿದ್ದರು.. ಇದೆಲ್ಲಾ ನೋಡ್ತಾ ಇದ್ರೆ, ಬಿಜೆಪಿ-ಜೆಡಿಎಸ್‌ ನಾಯಕರ ಆರೋಪಗಳಿಗೆ ಪ್ರತಿಯಾಗಿ ಅವರ ವಿರುದ್ಧದ ದಾಖಲೆಗಳು ರಿಲೀಸ್‌ ಮಾಡಲಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಸಿದೆ.. ಬಿಜೆಪಿ-ಜೆಡಿಎಸ್‌ ಸಭೆಗೂ ಒಂದು ದಿನದ ಮುಂಚೆ ಕಾಂಗ್ರೆಸ್‌ ದೊಡ್ಡ ಸಮಾವೇಶ ಮಾಡುತ್ತಿರುವುದು ಯಾವ ಕಾರಣಕ್ಕೆ..? ಅದರಲ್ಲಿ ಯಾರು ಏನು ಮಾತನಾಡುತ್ತಾರೆ..? ಎಂಬುದರ ಕುತೂಹಲ ಹೆಚ್ಚಾಗುತ್ತಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ನಿವಾಸಕ್ಕೆ ಬಂದ ಆ ನಾಯಕ!; ರಾಜ್ಯ ರಾಜಕಾರಣದಲ್ಲಿ ಕುತೂಹಲ!

ಈಗಾಗಲೇ ಬಿಜೆಪಿ-ಜೆಡಿಎಸ್‌ ಮಾಡಿರುವ ಆಪಾದನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದಾರೆ.. ದಾಖಲೆಗಳನ್ನೂ ರಿಲೀಸ್‌ ಮಾಡಿ ತಮ್ಮದೇನೂ ತಪ್ಪಿಲ್ಲ ಎಂದು ಹೇಳಿದ್ದಾರೆ.. ಇದರ ನಡುವೆ ಅವರು ನಾಳೆಯ ಸಮಾವೇಶದಲ್ಲಿ ಏನೆಲ್ಲಾ ತೆರೆದಿಡಲಿದ್ದಾರೆ ಅನ್ನೋದೇ ಕುತೂಹಲ.. ಲೋಕಸಭಾ ಚುನಾವಣೆಗೂ ಮುಂಚೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿತ್ತು.. ಆದರೂ ಕೂಡಾ ಸಿಎಂ ಸಿದ್ದರಾಮಯ್ಯ ಅವರಾಗಲೀ, ಸರ್ಕಾರದ ಯಾವುದೇ ನಾಯಕರೂ ಯಡಿಯೂರಪ್ಪ ವಿರುದ್ಧ ಮಾತನಾಡಿರಲಿಲ್ಲ.. ಯಡಿಯೂರಪ್ಪ ಅವರ ವಿಚಾರಣೆ ನಡೆಸುವ ಗೋಜಿಗೂ ಹೋಗಿರಲಿಲ್ಲ.. ಆದ್ರೆ ನಿನ್ನೆ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರು ಆ ಚಿಕ್ಕ ಮಗುವಿಗೆ ಹಾಗೆ ಮಾಡಬಹುದಿತ್ತೇ..? ಈ ವಯಸ್ಸಲ್ಲಿ ಅದು ಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.. ಹೀಗಾಗಿ ಕಾಂಗ್ರೆಸ್‌ ನಾಯಕರು ನಾಳೆಯ ಸಮಾವೇಶದಲ್ಲಿ ವಿರೋಧ ಪಕ್ಷಗಳ ನಾಯಕರ ಹಲವು ಭ್ರಷ್ಟಾಚಾರಗಳ ಬಗ್ಗೆಯೂ ಮಾತನಾಡುವ ಸಾಧ್ಯತೆ ಇದೆ..

ಇದನ್ನೂ ಓದಿ; ಪಾದಯಾತ್ರೆಯಲ್ಲಿ ಪ್ರೀತಂಗೌಡ ಎಂಟ್ರಿ ಏನು ಹೇಳುತ್ತೆ..?; ಜೆಡಿಎಸ್‌ ನಿಲುವೇನು..?

Share Post