ಹಿಂದೂ ಹುಡುಗನನ್ನು ಪ್ರೀತಿಸಿದ್ದಕ್ಕೆ ನಡುರಸ್ತೆಯಲ್ಲೇ ತಂಗಿಯ ಕೊಲೆ!
ಮೀರತ್(ಉತ್ತರಪ್ರದೇಶ); ತನ್ನ ತಂಗಿ ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆ ಆಕೆಯನ್ನು ನಡು ರಸ್ತೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.. ಮೀರತ್ ಜಿಲ್ಲೆಯ ಬಾಗ್ಲಾ ಶೇಖು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.. 20 ವರ್ಷ ಹಸೀನ್ ಎಂಬಾತ ತನ್ನ 16 ವರ್ಷದ ಸಹೋದರಿಯನ್ನು ನಡು ರಸ್ತೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.. ಎಲ್ಲರೂ ಅದನ್ನು ನೋಡುತ್ತಾ ನಿಂತಿದ್ದವೇ ಹೊರತು ಯಾರೂ ಬಿಡಿಸಲೂ ಹೋಗಿಲ್ಲ.. ಈ ದೃಶ್ಯ ಯಾರೋ ವಿಡಿಯೋ ಮಾಡಿದ್ದು, ಅದು ಎಲ್ಲೆಡೆ ವೈರಲ್ ಆಗುತ್ತಿದೆ..
ಇದನ್ನೂ ಓದಿ; ತಾಯಿಯಾಗುತ್ತಿದ್ದಾರಂತೆ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ..
ಆರೋಪಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಾನೆ ಎಂದು ತಿಳಿದುಬಂದಿದೆ.. ತನ್ನ ತಂಗಿ ಅನ್ಯಧರ್ಮದ ಹುಡುಗನನ್ನು ಪ್ರೀತಿಸುತ್ತಾಳೆ ಎಂದು ಗೊತ್ತಾಗಿದೆ.. ಇದರಿಂದ ಆಕ್ರೋಶಗೊಂಡ ಆತ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ತಂಗಿಯನ್ನು ತಡೆದು ಅಲ್ಲೇ ಆಕೆಯನ್ನು ಕೊಲೆ ಮಾಡಿದ್ದಾರೆ.. ಅಂದಹಾಗೆ ಬಾಲಕಿ ಈ ಹಿಂದೆ ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗಿದ್ದಳು.. ಅಪ್ರಾಪ್ತಳಾಗಿದ್ದರಿಂದ ಇಬ್ಬರನ್ನೂ ಪೊಲೀಸರು ವಾಪಸ್ ಕರೆಸಿದ್ದರು.. ಹುಡುಗಿಯನ್ನು ಪೋಷಕರಿಗೆ ಒಪ್ಪಿಸಲಾಗಿತ್ತು.. ಅನಂತರವೂ ಹುಡುಗಿ ತನ್ನ ಪ್ರಿಯಕರನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಳಂತೆ.. ಇದ್ರಿಂದ ಆಕ್ರೋಶಗೊಂಡ ಆಕೆಯನ್ನು ಅಣ್ಣನೇ ಕೊಲೆ ಮಾಡಿದ್ದಾನೆ..
ಇದನ್ನೂ ಓದಿ; ಯೂಟ್ಯೂಬ್ ನೋಡಿ ಬಾಂಬ್ ತಯಾರಿ ಯತ್ನ; ಸ್ಫೋಟಗೊಂಡ 5 ಮಕ್ಕಳಿಗೆ ಗಾಯ!