CrimeNational

ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿ ಯತ್ನ; ಸ್ಫೋಟಗೊಂಡ 5 ಮಕ್ಕಳಿಗೆ ಗಾಯ!

ಬಿಹಾರ; ಯೂಟ್ಯೂಬ್‌ ಸೋಷಿಯಲ್‌ ಮೀಡಿಯಾ ಬಂದ ಮೇಲೆ ಹಲವು ಅನುಕೂಲಗಳ ಜೊತೆಗೆ ಅನಾನುಕೂಲಗಳೂ ಆಗುತ್ತಿವೆ.. ಸೋಷಿಯಲ್‌ ಮೀಡಿಯಾದಿಂದ ಬೇಕಿದ್ದು ಬೇಡವಾದದ್ದು ಎಲ್ಲವನ್ನೂ ಕಲಿಯುತ್ತಿದ್ದಾರೆ.. ಇವುಗಳನ್ನು ಒಳ್ಳೆಯದಕ್ಕೆ ಉಪಯೋಗಿಸಿದರೆ ಓಕೆ.. ಆದ್ರೆ ಕೆಲವರು ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.. ಕೆಟ್ಟಕ್ಕೆ ಬಳಸಲು ಹೋಗುತ್ತಿದ್ದಾರೆ.. ಅದೇ ರೀತಿ ಬಿಹಾರದ ಮುಜಾಫರ್‌ಪುರದಲ್ಲಿ ಮಕ್ಕಳು ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿಸಲು ಹೋಗಿದ್ದಾರೆ.. ಈ ವೇಳೆ ಸ್ಫೋಟ ಸಂಭವಿಸಿ ಐವರು ಮಕ್ಕಳು ಗಾಯಗೊಂಡಿದ್ದಾರೆ.. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ನಿವಾಸಕ್ಕೆ ಬಂದ ಆ ನಾಯಕ!; ರಾಜ್ಯ ರಾಜಕಾರಣದಲ್ಲಿ ಕುತೂಹಲ!

ಮಜಾಫರ್‌ಪುರದ ಗೈಫಾಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬೋರಿಡಿಕ್‌ ಬಳಿಯ ಮುನ್ನಿ ಕಲ್ಯಾಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಘಟನೆಯಲ್ಲಿ 8 ವರ್ಷದ ಲವಕುಮಾರ್‌, ಐದು ವರ್ಷದ ಜೈದೀಪ್‌ ಕುಮಾರ್‌, ಗುಡ್ಡು ಕುಮಾರ್‌, ಅಭಿಯಾಂಶು ಕುಮಾರ್‌ ಮುಂತಾದವರು ತೀವ್ರವಾಗಿ ಗಾಯಗೊಂಡಿದ್ದಾರೆ.. ಐವರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಪಾದಯಾತ್ರೆಯಲ್ಲಿ ಪ್ರೀತಂಗೌಡ ಎಂಟ್ರಿ ಏನು ಹೇಳುತ್ತೆ..?; ಜೆಡಿಎಸ್‌ ನಿಲುವೇನು..?

ಯೂಟ್ಯೂಬ್‌ನಲ್ಲಿ ಬಾಂಬ್‌ ತಯಾರಿ ಬಗ್ಗೆ ನೋಡಿ ತಿಳಿದಿದ್ದ ಮಕ್ಕಳು ಶಾಲೆಯಿಂದ ವಾಪಸ್‌ ಬರುವಾಗ ಬಾಂಬ್‌ ತಯಾರಿಸಲು ಮುಂದಾಗಿದ್ದಾರೆ.. ಪಟಾಕಿ ಹಾಗೂ ಬೆಂಕಿ ಕಡ್ಡಿಗಳಿಂದ ಗನ್‌ ಪೌಡರ್‌ ತೆಗೆದಿದ್ದಾರೆ.. ಅದನ್ನು ಉಂಡೆ ಮಾಡಿ ಬಾಂಬ್‌ ರೀತಿ ತಯಾರಿಸಲು ಹೊರಟಿದ್ದಾರೆ.. ಇದನ್ನು ಸ್ಫೋಟಿಸಲು ಹೋದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.. ಶಾಲೆಯಿಂದ ನಾವೆಲ್ಲಾ ಮನೆಗೆ ಹೋಗುತ್ತಿದ್ದೆವು. ಈ ವೇಳೆ ಬಾಂಬ್‌ ತಯಾರಿಸೋಣ ಬನ್ನಿ ಎಂದು ಬಲವೀರ್‌ ಕುಮಾರ್‌ ಎಂಬಾತ ಕರೆದ.. ಹೀಗಾಗಿ ನಾವೆಲ್ಲಾ ಹೋಗಿ ಬೆಂಕಿಕಡ್ಡಿಗಳಿಂದ ಪೌಡರ್‌ ತೆಗೆದು ಸ್ಪೋಟಿಸಲು ಪ್ರಯತ್ನ ಮಾಡಿದೆವು ಎಂದು ಮಕ್ಕಳು ಹೇಳಿಕೊಂಡಿದ್ದಾರೆ..

ಇದನ್ನೂ ಓದಿ; ಇಂದು ನಟ ನಾಗ ಚೈತನ್ಯ-ನಟಿ ಶೋಭಿತಾ ಧೂಳಿಪಾಳ್ಳ ನಿಶ್ಚಿತಾರ್ಥ!

Share Post