BengaluruCrime

ಹೆಂಡತಿಯನ್ನು ಕೊಂದು ಪರಾರಿ ಯತ್ನ; ಕಟ್ಟಡದಿಂದ ಬಿದ್ದ ಸಾವನ್ನಪ್ಪಿದ ಗಂಡ!

ಕೋಲಾರ; ಬೆಂಗಳೂರಿನಲ್ಲಿ ಪತ್ನಿ ಕೊಂದು ಕೋಲಾರಕ್ಕೆ ಬಂದು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪತಿ ಕಟ್ಟಡದಿಂದ ಜಿಗಿಯುವಾಗ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.. ಐದು ದಿನದ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೊಲೆ ಮಾಡಿದ್ದ ಆರೋಪಿ, ಕೋಲಾರದ ಚಿಕ್ಕಮ್ಮನ ಮನೆ ಸೇರಿದ್ದ.. ಪೊಲೀಸರು ಬಂದಿದ್ದು ಗೊತ್ತಾಗುತ್ತಿದ್ದಂತೆ ಮನೆ ಮೇಲಿಂದ ಹಾರಿ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ಭಾರತದ ಕುಸ್ತಿಪಟು ವಿನೀಶ್‌ ಫೋಗಟ್‌ ಚಿನ್ನದ ಬೇಟೆ; ಫೈನಲ್‌ ಪಂದ್ಯದತ್ತ ಎಲ್ಲರ ಚಿತ್ತ!

ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತಬ್ರೇಝ್‌ ಎಂಬಾತ ಫೇಸ್‌ಬುಕ್‌ ಲೈವ್‌ ಬಂದು ಲೈವ್‌ನಲ್ಲೇ ತನ್ನ ಪತ್ನಿ 34 ವರ್ಷದ ಫಾತಿಮಾಳನ್ನು ಕೊಲೆ ಮಾಡಿದ್ದ.. ಅನಂತರ ಆರೋಪಿ ತಪ್ಪಿಸಿಕೊಂಡು ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ.. ವಿಷಯ ತಿಳಿದ ಪೊಲೀಸರು ಕೋಲಾರಕ್ಕೆ ಹೋದಾಗ ಈ ಘಟನೆ ನಡೆದಿದೆ..

ಇದನ್ನೂ ಓದಿ; ಸ್ವಂತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

ಆರೋಪಿ ತಬ್ರೇಝ್‌ ಪಾಷಾ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.. ಜೊತೆಗೆ ಗಾಂಜಾ ಕೇಸ್‌ನಲ್ಲೂ ಈತ ಭಾಗಿಯಾಗಿದ್ದ.. ಹೀಗಾಗಿ ಪತ್ನಿ ಫಾತಿಮಾ ಐದು ವರ್ಷಗಳ ಹಿಂದೆಯೇ ಗಂಡನಿಂದ ಬೇರೆಯಾಗಿದ್ದಳು.. ಇಬ್ಬರು ಮಕ್ಕಳನ್ನು ಕರೆದುಕೊಂಡು ತವರು ಸೇರಿದ್ದ ಫಾತಿಮಾ ಅಂಗವಿಕಲ ತಾಯಿಯೊಂದಿಗೆ ಜೀವಿಸುತ್ತಿದ್ದಳು.. ಆದ್ರೆ ಆಗಾಗ ಅಲ್ಲಿಗೂ ಬಂದು ಆರೋಪಿ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಐದು ದಿನಗಳ ಹಿಂದೆ ಮನೆಗೆ ಬಂದಿದ್ದ ಆರೋಪಿ ಫೇಸ್‌ ಬುಕ್‌ ಲೈವ್‌ ಮಾಡುತ್ತಲೇ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾನೆ.. ನಂತರ ಅತ್ತೆಯ ಮುಂದೆಯೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.. ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿ ಕೋಲಾರದ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

Share Post