HealthLifestyle

ಸೊಳ್ಳೆಗಳು ಇವರನ್ನು ಮಾತ್ರ ಹೆಚ್ಚಾಗಿ ಕಚ್ಚುತ್ತವೆ ಏಕು..?

ಬೆಂಗಳೂರು; ಮಳೆಗಾಲ ಬಂತು ಅಂದ್ರೆ ಸೊಳ್ಳೆಗಾಲ ಕಾಟ ಹೆಚ್ಚಾಗಿಬಿಡುತ್ತೆ.. ಮನೆ ಬಾಗಿಲು ತೆಗೆದರೆ ಸಾಕು ಸೊಳ್ಳೆಗಳು ಮನೆಯೊಳಗೆ ಲಗ್ಗೆ ಇಡುತ್ತವೆ.. ರಾತ್ರಿಯಿಡೀ ಕಾಟ ಕೊಡುತ್ತವೆ.. ಅಂದಹಾಗೆ ಹೆಣ್ಣು ಸೊಳ್ಳೆಗಳು ಮಾತ್ರ ಮನುಷ್ಯರ ರಕ್ತ ಕುಡಿಯೋದು, ಗಂಡು ಸೊಳ್ಳೆಗಳು ಹೂವುಗಳ ಮಕರಂದವನ್ನು ಹೀರಿ ಬದುಕುತ್ತವೆ.. ಮೊಟ್ಟೆಗಳನ್ನು ಉತ್ಪಾದನೆ ಮಾಡೋದಕ್ಕಾಗಿ ಹೆಣ್ಣು ಸೊಳ್ಳೆಗಳು ಮನುಷ್ಯರ ರಕ್ತದಲ್ಲಿನ ಪ್ರೋಟೀನ್‌ ಬಳಸುತ್ತವೆ.. ಇದಕ್ಕಾಗಿ ಅವು ಮನುಷ್ಯನಿಗೆ ಕಚ್ಚುತ್ತವೆ.. ಮನುಷ್ಯನನ್ನು ಕಚ್ಚುವ ಸಂದರ್ಭದಲ್ಲಿ ಹೆಣ್ಣು ಸೊಳ್ಳೆಗಳು ಮಾನವನ ರಕ್ತಕ್ಕೆ ಲಾಲಾರಸ ಸೇರಿಸುತ್ತವೆ.. ಇದು ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ, ಝಿಕಾ ವೈರಸ್ ನಂತಹ ಸೋಂಕುಗಳು ಹರಡಲು ಕಾರಣವಾಗುತ್ತವೆ..

ಇದನ್ನೂ ಓದಿ; ಕುಡಿದುಬಂದು ತಾಯಿಯ ಮೇಲೇ ಅತ್ಯಾಚಾರ ಮಾಡಿದ ಪಾಪಿ ಮಗ!

ಮಳೆಗಾಲದಲ್ಲಿ ನಾವು ಮೈತುಂಬಾ ಮುಚ್ಚುವ ಬಟ್ಟೆ ಧರಿಸುವುದು ಉತ್ತಮ.. ಇಲ್ಲದಿದ್ದರೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.. ಇನ್ನು ತಿಳಿಬಣ್ಣದ ಬಟ್ಟೆಗಳಿಗಿಂದ ಅವು ಗಾಢಬಣ್ಣದ ಬಟ್ಟೆಗಳಿಗೆ ಹೆಚ್ಚು ಆಕರ್ಷಿತವಾಗುತ್ತವಂತೆ.. ಇನ್ನು ಡೆಂಘೀಗೆ ಕಾರಣವಾಗುವ ಈಡಿಸ್‌ ಸೊಳ್ಳೆಗಳು ಕಾಲುಗಳಿಗೆ ಕಚ್ಚೋದು ಕಡಿಮೆ, ಅವು ಕೈಗಳಿಗೆ ಹೆಚ್ಚಾಗಿ ಕಚ್ಚುತ್ತವೆ.. ಹೀಗಾಗಿ ಉದ್ದ ತೋಳಿನ ಬಟ್ಟೆಗಳು ಧರಿಸಿದರೆ ಡೆಂಘೀಯಿಂದ ರಕ್ಷಣೆ ಪಡೆಯಬಹುದಾಗಿದೆ.. ಮಲೇರಿಯಾಗೆ ಕಾರಣವಾಗುವ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಗಳು ಮನುಷ್ಯನ ಕಾಲುಗಳಿಗೆ ಹೆಚ್ಚಾಗಿ ಕಚ್ಚುತ್ತವೆ.. ಹೀಗಾಗಿ ಕಾಲುಗಳು ಮುಚ್ಚುವಂತಹ ಬಟ್ಟೆಗಳನ್ನೂ ಧರಿಸುವುದು ಒಳ್ಳೆಯದು.. ಮಳೆಗಾಲದಲ್ಲಿ ನೀರು ಹೆಚ್ಚಾಗಿ ನಿಲ್ಲುವುದರಿಂದ ಅದರಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ.. ಹೀಗಾಗಿ ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗುತ್ತವೆ.. ಇದರಿಂದ ಕಾಯಿಲೆಗಳೂ ಹೆಚ್ಚಾಗಿ ಹರಡುತ್ತವೆ..

ಇದನ್ನೂ ಓದಿ; ನಿಮ್ಮ ಸಂಪಾದನೆ 25 ಸಾವಿರಕ್ಕಿಂತ ಕಡಿಮೆ ಇದ್ದರೂ ಕೋಟ್ಯಧಿಪತಿಗಳಾಗಬಹುದು..!

ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಸೊಳ್ಳೆಗಳ ಕಡಿಮೆ ಕಡಿಯುತ್ತವೆ ಎಂದು ಅಧ್ಯಯನದಿಂದ ಗೊತ್ತಾಗಿದೆ.. ಇನ್ನು ಸೊಳ್ಳೆಗಳು ಕೆಲ ರಕ್ತದ ಗುಂಪು ಇರುವ ಮನುಷ್ಯರಿಗೆ ಮಾತ್ರ ಹೆಚ್ಚಾಗಿ ಕಚ್ಚುತ್ತವೆ.. ಅದ್ರಲ್ಲೂ ‘O’ ರಕ್ತದ ಗುಂಪು ಹೊಂದಿರುವ ಜನರಿಗೆ ಸೊಳ್ಳೆಗಳು ಹೆಚ್ಚು ಕಾಟ ಕೊಡುತ್ತವೆ..
ಅಲ್ಲದೆ, ಹೆಚ್ಚಿನ ದೇಹದ ಉಷ್ಣತೆ ಹೊಂದಿರುವ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಕೆಲ ಅಧ್ಯಯನಗಳು ಹೇಳುತ್ತವೆ.. ಆಲ್ಕೋಹಾಲ್ ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ದೇಹದಲ್ಲಿ ಬೆವರು ಹೆಚ್ಚಲಿದ್ದು, ಇದಕ್ಕೆ ಹೆಣ್ಣು ಸೊಳ್ಳೆಗಳು ಆಕರ್ಷಿತವಾಗುತ್ತವೆ..

ಇದನ್ನೂ ಓದಿ; ಬೈಕ್‌ಗೆ ಸರ್ಕಾರಿ ಬಸ್‌ ಡಿಕ್ಕಿ; ತುಮಕೂರಿನಲ್ಲಿ ವ್ಯಕ್ತಿ ಸಾವು!

Share Post